Film & EntertainmentKannada NewsKarnataka NewsNational

*ರಾಷ್ಟ್ರಪತಿ ಭವನದಲ್ಲಿ ಕಾಂತಾರ ಚಿತ್ರ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ‘ಕಾಂತಾರ ಚಾಪ್ಟರ್ 1’ ಪ್ರದರ್ಶನಗೊಳ್ಳಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಅಧಿಕಾರಿಗಳು ಚಿತ್ರ ವೀಕ್ಷಿಸಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರಾಷ್ಟ್ರಪತಿ ಭವನದಲ್ಲಿ ‘ಕಾಂತಾರ ಚಾಪ್ಟರ್ 1’ ಚಿತ್ರದ ವಿಶೇಷ ಪ್ರದರ್ಶನ ಆಯೋಜಿಸಲಾಗಿದೆ. 

ಈ ಕಾರ್ಯಕ್ರಮವು ಕನ್ನಡ ಚಿತ್ರರಂಗದ ಸಾಧನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಮಹತ್ವದ ಕ್ಷಣವಾಗಿದೆ. ಚಿತ್ರದ ಕಥಾವಸ್ತು, ಸಾಂಸ್ಕೃತಿಕ ಚಿತ್ರಣ ಮತ್ತು ಕಲಾತ್ಮಕ ಶೈಲಿಯು ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಜಾಗತಿಕವಾಗಿ ಪ್ರತಿನಿಧಿಸುತ್ತಿದೆ ಎಂದು ಹೊಂಬಾಳೆ ಫಿಲಂಸ್‌ ತಿಳಿಸಿದೆ.

 ಈ ವಿಶೇಷ ಪ್ರದರ್ಶನವು ಕನ್ನಡ ಸಿನಿಮಾದ ಜಾಗತಿಕ ಮನ್ನಣೆಯನ್ನು ಗುರುತಿಸುವ ಮಹತ್ವದ ಕ್ಷಣವಾಗಿದೆ.

Home add -Advt

Related Articles

Back to top button