* ಬೆಳಗಾವಿಯಲ್ಲಿ ಐಟಿ-ಬಿಟಿ ಕಂಪನಿ ಆರಂಭಿಸಲು ಆಗ್ರಹಿಸಿ ಕರವೇ ಪ್ರತಿಭಟನೆ*

https://www.facebook.com/share/v/1BTQGdZfEu
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಐಟಿ-ಬಿಟಿ ಕಂಪನಿಗಳನ್ನು ಆರಂಭಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವತಿಯಿಂದ ವಿನೂತನ ಪ್ರತಿಭಟನೆಯನ್ನು ನಡೆಸಲಾಯಿತು. ಜಿಲ್ಲಾ ಅಧ್ಯಕ್ಷ ಅಭಿಲಾಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಬೆಳಗಾವಿಯಲ್ಲಿ ಐಟಿ-ಬಿಟಿ ಕಂಪನಿಗಳನ್ನು ಆರಂಭಿಸುವಂತೆ ಗುರುವಾರ ಇಂಜಿನಿಯರ್ ಪದವಿ ಪಡೆದು ಆಟೋ ಓಡಿಸುತ್ತಿರುವ ಪದವಿಧರನೊಂದಿಗೆ ಸಮೋಸಾಗಳನ್ನು ಮಾರಾಟ ಮಾಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಐಟಿ-ಬಿಟಿ ಕಂಪನಿಗಳು ಇರದ ಕಾರಣ ಬೆಳಗಾವಿಯಿಂದ ಸುಮಾರು 20 ಸಾವಿರ ಉದ್ಯೋಗಾಕಾಂಕ್ಷಿಗಳು ನೌಕರಿಗಾಗಿ ಬೆಂಗಳೂರು ಮತ್ತು ಪುಣೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಬೆಳಗಾವಿಯಲ್ಲಿಯೂ ಐಟಿ-ಬಿಟಿ ಕಂಪನಿಗಳನ್ನು ನಿರ್ಮಾಣ ಮಾಡಿದರೆ, ಉದ್ಯೋಗ ಅರಸಿ ಹೋಗುವ ವಿದ್ಯಾರ್ಥಿಗಳಿಗೆ ಮತ್ತು ತಂದೆ -ತಾಯಿಯನ್ನು ಬಿಟ್ಟು ಬದುಕುತ್ತಿರುವ ಮಕ್ಕಳಿಗೆ ಅನುಕೂಲವಾಗುತ್ತದೆ. ಅಲ್ಲದೇ, ಬೆಳಗಾವಿಯೂ ಅಭಿವೃದ್ಧಿಯೂ ಆಗುತ್ತದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಪ್ರಾಣ ತ್ಯಾಗಕ್ಕೂ ಸಿದ್ಧವಾಗಿದ್ದು, ಉಗ್ರ ಹೋರಾಟವನ್ನು ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಗಲಗಲಿ, ಗುರುಗೌಡ ಪಾಟೀಲ್, ಬಾಳಾಸಾಹೇಬ್ ಉದಗಟ್ಟಿ, ಅರುಣ್ ಪಾಟೀಲ್, ಗಿರಿಜಾ ಜೋಯಲ್, ರಾಜು ಕಲಪತ್ರಿ, ಪ್ರಕಾಶ್ ಹಟ್ಟಿಹೊಳಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.




