Belagavi NewsBelgaum NewsKannada NewsKarnataka NewsLatestPolitics

*ಬೆಳಗಾವಿಯಲ್ಲಿಯೂ ಬೆಂಗಳೂರು ರೀತಿ ಹೋರಾಟ; ಕರವೇ ನಾರಾಯಣಗೌಡ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಆದೇಶ ಹೊರಡಿಸಲಾಗಿದೆ. ನಾಮಫಲಕಗಳು ಸೇರಿದಂತೆ ಶೇ.೬೦ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. ಇಡೀ ರಾಜ್ಯವೇ ಕನ್ನಡಮಯವಾಗಬೇಕು. ಬೆಳಗಾವಿಯಲ್ಲಿಯೂ ಕನ್ನಡ ರಾರಾಜಿಸಬೇಕು ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣಗೌಡ, ಫೆ.೨೮ರೊಳಗೆ ರಾಜ್ಯಾದ್ಯಂತ ಕನ್ನಡ ಕಡ್ಡಾಯಗೊಳಿಸಬೇಕು ಎಂದು ಸರ್ಕಾರ ಗಡುವು ನೀಡಿದೆ. ಆ ಬಳಿಕ ರಜ್ಯದ ೩೧ ಜಿಲ್ಲೆಗಳಲ್ಲಿಯೂ ಕರವೆ ಹೋರಾಟ ನಡೆಸಲಿದೆ ಎಂದರು.

ಶೇ.೬೦ರಷ್ಟು ಕನ್ನಡ ಕಡ್ಡಾಯ ಮಾಡದಿದ್ದರೆ ಬೆಳಗಾವಿಯಲ್ಲಿಯೂ ಬೆಂಗಳೂರು ಮಾದರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಫೆ ೨೮ರ ಬಳಿಕ ಹೋರಾಟ ನಡೆಸಲಾಗುವುದು ಮತ್ತೆ ಜೈಲಿಗೆ ಹೋದರೂ ಚಿಂತೆಯಿಲ್ಲ ರಾಜ್ಯಾದ್ಯಂತ ಕನ್ನಡ ಕಡ್ಡಾಯವಾಗಬೇಕು ಎಂದು ಆಗ್ರಹಿಸಿದರು.

Home add -Advt

Related Articles

Back to top button