
ಪ್ರಗತಿವಾಹಿನಿ ಸುದ್ದಿ: ಕೆ.ಎಸ್.ಆರ್.ಟಿ.ಸಿ ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.
ಬಾಗಲಕೋಟೆ- ಬೆಳಗಾವಿ ಹೆದ್ದಾರಿ ತಡೆ ನಡೆಸಿದ ಕರವೇ ಕಾರ್ಯಕರ್ತರು, ಎಂಇಎಸ್ ಪುಂಡರ ಅಣಕು ಶವ ಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಸ್ತೆಯಲ್ಲಿಯೇ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸಿದ್ದಾರೆ.
ಇದೇ ವೇಳೆ ಹಲ್ಲೆಗೊಳಗಾದ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿರುವ ಕ್ರಮವನ್ನು ಖಂಡಿಸಿದರು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಹಲವು ಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ದೀಪಕ ಗುಡಗನಟ್ಟಿ,
ಸುರೇಶ್ ಗವನ್ನವರ,
ಗಣೇಶ್ ರೋಕಡೆ,
ರಾಜು ನಾಶಿಪುಡಿ,
ದಶರಥ ಬನೋಶಿ,
ಬಾಳು ಜಡಗಿ,
ಹೊಳೆಪ್ಪಾ ಸುಲಧಾಳ,
ಸತೀಶ್ ಗುಡದವರ,
ನಿಂಗರಾಜ್ ಗುಂಡ್ಯಗೋಳ,
ಪ್ರಕಾಶ ಲಮಾಣಿ,
ಬಸವರಾಜ ಅವರೊಳಿ,
ರಮೇಶ್ ಯರಗನ್ನವರ,
ಗಂಗಾರಾಮ ಶೀಗಿಹಳ್ಳಿ ಮೊದಲಾದವರು ಇದ್ದರು.