Karnataka NewsLatest

*ಯುವತಿ ಮೇಲೆ ಅತ್ಯಾಚಾರ: ಮಾದಕ ವಸ್ತು ನೀಡಿ ಕೃತ್ಯ*

ಪ್ರಗತಿವಾಹಿನಿ ಸುದ್ದಿ: ಮಾದಕ ವಸ್ತುವಿನ ಅಮಲಿನಲ್ಲಿ ಕಾಮುಕನೊಬ್ಬ 21 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ.

ಯುವತಿ ಪೋಷಕರು ನೀಡಿದ ದೂರಿನ ಮೇರೆಗೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ತಾಫ್ ಬಂಧಿತ ಆರೋಪಿ.

ಈ ಪ್ರಕರಣ ಸಂಬಂಧ ಹಿಂದೂ ಪರ ಸಂಘಟನೆಗಳು ಇದು ಅತ್ಯಾಚಾರ ಮಾತ್ರವಲ್ಲ, ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದ್ದು, ಇತರ ಆರೋಪಿಗಳನ್ನು ಬಂಧಿಸಿಬೇಕು ಎಂದು ಆಗ್ರಹಿಸಿದೆ.

ಯುವತಿಗೆ ಆರೋಪಿ ಅಲ್ತಾಫ್ ಇನ್ ಸ್ಟಾ ಗ್ರಾಂ ಮೂಲಕ ಪರಿಚಯನಾಗಿದ್ದು, ಆಕೆಯನ್ನು ಪುಸಲಾಯಿಸಿ ತುತ್ತಾಡಲು ಕರೆದೊಯ್ದಿದ್ದಾನೆ. ಬಳಿಕ ತನ್ನಿಬ್ಬರು ಸ್ನೇಹಿತರನ್ನು ಕರೆಸಿ ಬಿಯರ್ ತರಿಸಿದ್ದ. ಬೀಯರ್ ನಲ್ಲಿ ಮಾದಕ ವಸ್ತು ಬೆರೆಸಿ ಸೇವಿಸಿ, ಯುವತಿಗೂ ಕೊಟ್ಟು ಅತ್ಯಾಚಾರವೆಸಗಿದ್ದಾರೆ. ಕೃತ್ಯದ ಬಳಿಕ ಯುವತಿಯನ್ನು ಮನೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಯುವತಿ ಪೋಷಕರ ದೂರಿನ ಮೇರೆಗೆ ಅಲ್ತಾಫ್ ನನ್ನು ಬಂಧಿಸಲಾಗಿದೆ.

Home add -Advt

ಸಂತ್ರಸ್ತ ಯುವತಿ ಹೇಳಿಕೆ ಹಾಗೂ ವೈದ್ಯಕೀಯ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button