
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಮೇ 10ರಿಂದ 24ರ ವರೆಗೆ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕೃತ ಘೋಷಣೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಮೇ 10ರಿಂದ ಬೆಳಿಗ್ಗೆ 6 ರಿಂದ ಮೇ 24ರವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗುತ್ತಿದೆ. ಹೋಟೆಲ್, ಪಬ್, ಬಾರ್, ರೆಸ್ಟೋರಂಟ್ ಗಳು, ಕೈಗಾರಿಕೆಗಳು ಸಂಪೂರ್ಣ ಬಂದ್ ಆಗಲಿವೆ ಎಂದು ತಿಳಿಸಿದರು.
ಏನಿರುತ್ತೆ; ಏನಿರಲ್ಲ?:
ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ
ಬೆಳಿಗ್ಗೆ 10ಗಂಟೆ ಬಳಿಕ ಜನರ ಓಡಾಟ, ವಾಹನ ಸಂಚಾರಕ್ಕೆ ನಿಷೇಧ
ಸಾರಿಗೆ ಸಂಚಾರ ಸಂಪೂರ್ಣ ಬಂದ್
ಖಾಸಗಿ ಬಸ್ ಸಂಚಾರಕ್ಕೂ ಬ್ರೇಕ್
ಅಂತರ್ ಜಿಲ್ಲಾ ಓಡಾಟಕ್ಕೆ ನಿರ್ಬಂಧ
ಹಾಲು-ಮೊಸರು ಬೂತ್ ಗಳಿಗೆ ಅವಕಾಶ
ತುರ್ತು ಸೇವೆ, ಆಸ್ಪತ್ರೆಗಳಿಗೆ ಮಾತ್ರ ವಾಹನದಲ್ಲಿ ಸಂಚರಿಸಬಹುದು
ಹೋಟೆಲ್ ಬಾರ್ ರೆಸ್ಟೋರಂಟ್ ಗಳಲ್ಲಿ ಪಾರ್ಸೆಲ್ ಗಳಿಗೆ ಮಾತ್ರ ಅವಕಾಶ
ಪಾರ್ಸೆಲ್ ಗಾಗಿ ವಾಹನಗಳಲ್ಲಿ ಹೋಟೇಲ್ ಗಳಿಗೆ ಹೋಗುವಂತಿಲ್ಲ, ನಡೆದುಕೊಂಡು ಹೋಗಲು ಮಾತ್ರ ಅವಕಾಶ
ತಳ್ಳು ಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ
ಆಸ್ಪತ್ರೆ, ಮೆಡಿಕಲ್ ಶಾಪ್ ಗಳಿಗೆ ಅವಕಾಶ
ಕೂಲಿ ಕಾರ್ಮಿಕರು ಬೆಂಗಳೂರು ಬಿಡದಂತೆ ಮನವಿ
ಕಟ್ಟಡ ಕಾರ್ಮಿಕರಿಗೆ ಯಾವುದೇ ನಿರ್ಬಂಧವಿಲ್ಲ
ಮದುವೆ ಕಾರ್ಯಕ್ರಮಗಳಿಗೆ 50 ಜನರಿಗಷ್ಟೇ ಅವಕಾಶ
ರಾಜಕೀಯ, ಸಾಮಾಜಿಕ, ಕ್ರೀಡೆ, ಧಾರ್ಮಿಕ ಚಟುವಟಿಕೆ, ಸಭೆ-ಸಮಾರಂಭಕ್ಕೆ ನಿರ್ಬಂಧ
ಮೇ 24ರವರೆಗೆ ಮೆಟ್ರೋ ಸಂಚಾರ ಬಂದ್
ರೈಲು-ವಿಮಾನ ಸೇವೆ ಯಥಾಸ್ಥಿತಿ ಮುಂದುವರಿಕೆ
ರಾಜ್ಯದಲ್ಲಿ ಮೇ 10ರಿಂದ 24ರವರೆಗೆ ಕಂಪ್ಲೀಟ್ ಲಾಕ್ ಡೌನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ