Belagavi NewsBelgaum NewsKannada NewsKarnataka NewsNationalPolitics

*ಎನ್ ಪಿ ಎಸ್ ಬದಲು ಓಪಿಎಸ್ ಜಾರಿಗೆ ಬರಲಿ: ರಾಜ್ಯಾಧ್ಯಕ್ಷ ಶಿವಶಂಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸರ್ಕಾರ 7ನೇ ವೇತನ ಆಯೋಗ ಶಿಫಾರಸು ಜಾರಿಗೆ ತಂದಿದ್ದು, ಅದನ್ನು ಬೇಗ ಅನುಷ್ಠಾನ ಮಾಡಬೇಕು. ಜೊತೆಗೆ ಎನ್ ಪಿ ಎಸ್ ತಗೆದು ಓಪಿಎಸ್ ಜಾರಿಗೆ ತರಬೇಕು ಎಂದು ಕಾರ್ನಾಟಕ ರಾಜ್ಯ ಸರ್ಕಾರಿ ಎಸ್ ಸಿ, ಎಸ್ ಟಿ ನೌಕರರ ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಶಿವಶಂಕರ್ ಅವರು ಆಗ್ರಹಿಸಿದ್ದಾರೆ. 

ಶುಕ್ರವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರಿ ನೌಕರರ 7 ನೇ ವೇತನ ಆಯೋಗ ಆದಷ್ಟು ಬೇಗ ಅನುಷ್ಠನ ಮಾಡಬೇಕು. ಒಪಿಎಸ್ ಅನುಷ್ಠಾನ ಮಾಡಿ ಎನ್ ಪಿ ಎಸ್ ತೆಗೆಯಬೇಕು. ಖಾಲಿ ಇರುವ ಹುದ್ದೆಗಳ ಜೊತೆ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಜಾತಿಗಣತಿ ಇಲ್ಲದೆ ಒಳ ಮೀಸಲಾತಿ ಜಾರಿಗೆ ತರಬಾರದು. ರಾಜ್ಯದಲ್ಲಿ ವರ್ಗಾವಣೆ ಪ್ರಕ್ರಿಯೆ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಯಾವುದೇ ಶಾಸಕರ ಮಧ್ಯಸ್ಥಿಕೆ ಇಲ್ಲದೆ ಕೌಂಸ್ಲಿಂಗ್ ಮೂಲಕ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕಳೆದ 20 ವರ್ಷಗಳಿಂದ ಎಸ್ ಸಿ, ಎಸ್ ಟಿ ನೌಕರರನ್ನು ಒಂದು ವೇದಿಕೆಗೆ ತೆಗೆದುಕೊಂಡು ಬಂದು ಅವರ ಬಡ್ತಿ ಸಂರಕ್ಷಣಾ ಕಾಯ್ದೆ ಜಾರಿಗೆ ಬರಲು ಸಕ್ರಿಯವಾಗಿ ಕೆಲಸ ಮಾಡಿದ್ದೇವೆ. ಎಸ್ ಸಿ, ಎಸ್ ಟಿ ನೌಕರರಿಗೆ ಅರ್ಹರಿಗೆ ಸ್ಥಾನ ಮಾನ ಸಿಗುತ್ತಿಲ್ಲ. ಅವರಿಗೆ ಪ್ರತಿಭೆಗೆ ತಕ್ಕಂತೆ ಹುದ್ದೆಗಳು ನೀಡಬೇಕು ಎಂದು ಆಗ್ರಹಿಸಿದರು. 

Home add -Advt

Related Articles

Back to top button