Latest

ರೈತರ ಬಗ್ಗೆ ಕಾಳಜಿ ಇರುವವರು ಕರ್ನಾಟಕ ಬಂದ್ ನಲ್ಲಿ ಭಾಗಿಯಾಗಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ಮಸೂದೆ ಹಾಗೂ ಎಪಿಎಂಸಿ ತಿದ್ದುಪಡಿ ಮಸೂದೆ ವಿರೀಧಿಸಿ ನಾಳೆ ನಡೆಯಲಿರುವ ಕರ್ನಾಟಕ ಬಂದ್ ನಲ್ಲಿ ರೈತರ ಬಗ್ಗೆ ಕಾಳಜಿ ಇರುವವರೆಲ್ಲರೂ ಭಾಗಿಯಾಗಬೇಕು. ತೀವ್ರ ಸ್ವರೂಪದ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದು ಕರವೇ ಅಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ.

ಕರ್ನಾಟಕ ಬಂದ್ ಗೆ ಕರವೇ ಸಂಪೂರ್ಣ ಬೆಂಬಲ ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುವ ಬಂದ್ ನಲ್ಲಿ ಕರವೇ ಬಣ ಪಾಲ್ಗೊಳ್ಳಲಿದೆ ಎಂದರು.

ರೈತರಿಗೆ ಮರಣ ಶಾಸನವಾಗಿರುವ ಭೂ ಸುಧಾರಣಾ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು. ಈ ಕಾಯ್ದೆಯಿಂದಾಗಿ ರೈತರ ಭೂಮಿ ಹಣವಂತರ ಸ್ವತ್ತಾಗಲಿದೆ. ರೈತರು ಅವರ ಅಧಿನನವಾಗಲಿದ್ದಾರೆ. ನಾಳೆ ನಡೆಯಲಿರುವ ಬಂದ್ ಯಾವ ಸ್ವರೂಪಕ್ಕೂ ತಿರುಗಬಹುದು ಎಂದು ಹೇಳಿದರು.

Home add -Advt

Related Articles

Back to top button