Kannada NewsKarnataka NewsLatest

ಅಮೃತ್ ದೇಸಾಯಿ ಹೇಳಿಕೆಗೆ ಮಾಜಿ ಸಚಿವ ವಿನಯ ಕುಲಕರ್ಣಿ ಟಾಂಗ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎಲ್ಲೋ ಕುಳಿತು ವಿಡಿಯೋ ಮಾಡಿ ಬಿಡುತ್ತಾರೆ ಎಂದಿದ್ದ ಧಾರವಾಡ ಗ್ರಾಮೀಣ ಮತಕ್ಷೇತ್ರದ ಶಾಸಕ ಶಾಸಕ ಅಮೃತ ದೇಸಾಯಿ ಹೇಳಿಕೆ ಬಗ್ಗೆ ಅವರ ಬುದ್ದಿ ಮಟ್ಟ ಎಷ್ಟಿದೆ ಅವರು ಮಾತಾಡುತ್ತಾರೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ತಮ್ಮದೆ ಶೈಲಿಯಲ್ಲಿ ಟಾಂಗ್ ಕೊಟ್ಟರು.

ಇತ್ತೀಚೆಗೆ ಧಾರವಾಡ ಗ್ರಾಮೀಣ ಮತಕ್ಷೇತ್ರದ ಬಿಜೆಪಿ ಶಾಸಕ ಅಮೃತ ದೇಸಾಯಿ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ‌ ಸದ್ದು ಮಾಡಿ, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಆರೋಪ ಪ್ರತ್ಯಾರೋಪ ಜೋರಾಗಿ ನಡೆದಿದ್ದವು.‌ ಇದ್ಯಾವುದಕ್ಕೂ ಪ್ರತಿಕ್ರಿಯಿಸದ ಅವರು, ಗುರುವಾರ ಬೆಳಗಾವಿ ವಿಮಾನ‌ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ  ಮೊದಲ ಬಾರಿ ಪ್ರತಿಕ್ರಿಯಿಸಿ, “ಅವರ ಬುದ್ಧಿಮಟ್ಟ ಎಷ್ಟಿದೆಯೋ ಅಷ್ಟನ್ನೇ ಅವರು ಮಾತನಾಡುತ್ತಾರೆ” ಎಂದು ಟಾಂಗ್ ಕೊಟ್ಟರು.

ಬಹಳ ದಿನಗಳಿಂದ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಬೆಳಗಾವಿ, ಧಾರವಾಡ ಕಾರ್ಯಕರ್ತರು ಬೆಂಬಲಿಗರು ಸೇರಿ ನ. 7ರಂದು ಕಿತ್ತೂರಿನಲ್ಲಿ ನನ್ನ ಹುಟ್ಟು ಹಬ್ಬ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ಇದೆ. ಸುಮಾರು ಎರಡೂವರೆ ಲಕ್ಷ ಜನ ಅಂದು ಸೇರುವ ಸಾಧ್ಯತೆ ಇದೆ ಎಂದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್  ಬರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ನ ಎಲ್ಲ ನಾಯಕರು ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ವಿರೋಧಿಗಳಿಗೆ ಸಂದೇಶ ರವಾನಿಸುವ ಕಾರ್ಯಕ್ರಮ ಇದಲ್ಲ, ನಮ್ಮವರು ನಾವು ಕೂಡಿಕೊಂಡು ಕಾರ್ಯಕ್ರಮ ಮಾಡುತ್ತಿದ್ದೇವೆ,” ಎಂದರು.

Home add -Advt

ದಾಂಡೇಲಿಯಲ್ಲಿ ವ್ಯಕ್ತಿಯನ್ನು ಎಳೆದೊಯ್ದ ಮೊಸಳೆಗಳು

Related Articles

Back to top button