Belagavi NewsBelgaum NewsKannada NewsKarnataka NewsNational

ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರಾ ರೈಲು ಪ್ರಯಾಣ ಜೂ.23 ರಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರಾ ರೈಲು ದಿನಾಂಕ: 23.06.2024 ರಂದು ಬೆಳಿಗ್ಗೆ 8.00ಗಂಟೆಯಿಂದ ಬೆಳಗಾವಿ ರೈಲ್ವೆ ನಿಲ್ದಾಣದಿಂದ ಹೊರಡಲಿದೆ. 

ದಿನಾಂಕ: 01.07.2024 ರಂದು ಸದರಿ ರೈಲು 2ನೇ ಯಾತ್ರೆಯನ್ನು ಕೈಗೊಳ್ಳಲಿದ್ದು, ಆಸಕ್ತ ಯಾತ್ರಾರ್ಥಿಗಳು Website – www.irctctourism.com ರ ಮೂಲಕ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಈ ಯೋಜನೆಯಡಿ ಅತ್ಯಂತ ಕಡಿಮೆ‌ ವೆಚ್ಚದಲ್ಲಿ ರಾಮೇಶ್ವರದ ರಾಮೇಶ್ವರ ದೇವಾಲಯ; ಮದುರೈನ ಮೀನಾಕ್ಷಿ ದೇವಾಲಯ; ಕನ್ಯಾಕುಮಾರಿಯ ಭಗವತಿ ದೇವಾಲಯ ಮತ್ತು ತಿರುವನಂತಪುರದ‌ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಾಲಯಗಳಲ್ಲಿ ದರ್ಶನ ಪಡೆಯಬಹುದು.

ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15 ಸಾವಿರ ರೂಪಾಯಿಗಳಾಗಿದ್ದು, ಕರ್ನಾಟಕ ಸರಕಾರ 5 ಸಾವಿರ ರೂಪಾಯಿ ಸಹಾಯಧನ ನೀಡಲಿದ್ದು, ಯಾತ್ರಿಕರು 10 ಸಾವಿರ ರೂಪಾಯಿ ಭರಿಸಬೇಕಾಗುತ್ತದೆ.

ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರಾ ರೈಲು ಜೂನ್ 23 ರಂದು ಬೆಳಿಗ್ಗೆ 8 ಗಂಟೆಗೆ ಬೆಳಗಾವಿ ರೈಲು ನಿಲ್ದಾಣದಿಂದ ಹೊರಡಲಿದೆ. 

ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಹಾಗೂ ಬೆಂಗಳೂರು ರೈಲು ನಿಲ್ದಾಣಗಳು ಯಾತ್ರಾ ರೈಲು ಹತ್ತುವ ಮತ್ತು ಇಳಿಯುವ ನಿಲ್ದಾಣಗಳಾಗಿರುತ್ತವೆ.

ಸಾರ್ವಜನಿಕರು ಸದರಿ ಯಾತ್ರಾ ರೈಲುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಧಾರ್ಮಿಕ ದತ್ತಿ ಇಲಾಖೆಯ ಪ್ರಕಟಣೆಯಲ್ಲಿ ಕೋರಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button