Latest

*ಬೆಳಗಾವಿ ಗಡಿ ವಿಚಾರದಲ್ಲಿ ವಿವಾದಾತ್ಮಕ ನಿರ್ಣಯ ಮಂಡಿಸಿದ ಮಹಾ ಸಿಎಂ ಶಿಂಧೆ*

ಪ್ರಗತಿವಾಹಿನಿ ಸುದ್ದಿ; ಮುಂಬೈ: ಕರ್ನಾಟಕ-ಮಾಹಾರಾಷ್ಟ್ರ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕರ್ನಾಟಕದ ವಿರುದ್ಧ ವಿವಾದಾತ್ಮಕ ನಿರ್ಣಯ ಮಂಡಿಸಲಾಗಿದೆ.

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಕರ್ನಾಟಕದ ವಿರುದ್ಧ ನಿರ್ಣಯ ಮಂಡಿಸಿದ್ದಾರೆ. ಈ ಮೂಲಕ ಬೆಳಗಾವಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತೆ ಕ್ಯಾತೆ ತೆಗೆದಿದೆ.

ಬೆಳಗಾವಿ, 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಭಾಷಾವಾರು ಪ್ರಾಂತ್ಯವಾಗಿ ವಿಂಗಡಣೆಯಾದಾಗಿನಿಂದ ನಮಗೆ ಅನ್ಯಾಯವಾಗಿದೆ. ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಬೆಳಗಾವಿ, ಭಾಲ್ಕಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಿರ್ಣಯ ಮಂಡಿಸಿದ್ದಾರೆ.

ಸಿಎಂ ಶಿಂಧೆ ನಿರ್ಣಯಕ್ಕೆ ಪಕ್ಷಾತೀತವಾಗಿ ಮಹಾರಾಷ್ಟ್ರ ಶಾಸಕರಿಂದ ಬೆಂಬಲ ವ್ಯಕ್ತವಾಗಿದೆ. ಮಹಾರಾಷ್ಟ್ರದ ಉದ್ಧಟತನಕ್ಕೆ ಕರ್ನಾಟಕ ಕೆಂಡ ಕಾರಿದೆ.

“ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ, ಭಾಲ್ಕಿ ಸಹಿತ ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು”ಎಂದು ಕೇಂದ್ರ ಸರಕಾರವನ್ನು ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ಇಂದು ಮಂಗಳವಾರ ಮಧ್ಯಾಹ್ನ ಮಹಾರಾಷ್ಟ್ರದ ನಾಗ್ಪೂರದಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕರಿಸಲಾಯಿತು.

ಅಧಿವೇಶನದಲ್ಲಿ ಗಡಿವಿವಾದ ಕುರುತು ವ್ಯಾಪಕ ಚರ್ಚೆ ನಡೆಯಿತು. ಮಹತ್ವದ ಅಂಶಗಳು ಇಲ್ಲಿವೆ:
1) ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಕರ್ನಾಟಕದ ಗಡಿಭಾಗದಲ್ಲಿ ನಡೆದ ಚಳವಳಿಯಲ್ಲಿ ಮಡಿದ ಮರಾಠಿ ಭಾಷಿಕರನ್ನು ಹುತಾತ್ಮರೆಂದು ಪರಿಗಣಿಸಿ ಅವರಿಗೆ ಸ್ವಾತಂತ್ರ್ಯ ಯೋಧರ ಕುಟುಂಬಳಿಗೆ ನೀಡುವ ಮಾಸಿಕ 20 ಸಾವಿರ ರೂ.ಪಿಂಚಣಿ ನೀಡಲಾಗುವದು.

2)ಮಹಾರಾಷ್ಟ್ರದ ಜತ್ತ ತಾಲೂಕಿನ ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆಗೆ ಎರಡು ಸಾವಿರ ಕೋ.ರೂ.ಗಳ ಮಂಜೂರು ಮಾಡಲಾಗಿದೆ.

3)ಕರ್ನಾಟಕದ 865 ಹಳ್ಳಿ ಪಟ್ಟಣಗಳಲ್ಲಿ ವಾಸಿಸುವ ಮರಾಠಿಗರಿಗೆ ಮಹಾರಾಷ್ಟ್ರದಲ್ಲಿ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುವದು. ಅಲ್ಲದೇ ಬೆಳಗಾವಿ ಸಹಿತ ಎಲ್ಲ ಗ್ರಾಮ ಪಟ್ಟಣಗಳಲ್ಲಿ ನೋಂದಾಯಿತ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ಒದಗಿಸಲಾಗುವದು.

4)2004 ರಲ್ಲಿ ಮಹಾರಾಷ್ಟ್ರ ಸರಕಾರ ಸರ್ವೋನ್ನತ ನ್ಯಾಯಾಲಯದಲ್ಲಿ ದಾಖಲಿಸಿರುವ ಗಡಿವಿವಾದ ದಾವೆಯಲ್ಲಿ ವಾದಿಸುವ ಸಲುವಾಗಿ ಹಿರಿಯ ಸಂವಿಧಾನ ತಙ್ಞರನ್ನು ನೇಮಿಸಲಾಗಿದೆ. ಹಿರಿಯ ನ್ಯಾಯವಾದಿ ಹರೀಶ ಸಾಳ್ವೆ ಅವರನ್ನೂ ಸಹ ಸಂಪರ್ಕಿಸಲಾಗಿದ್ದು ಅವರೂ ವಾದ ಮಂಡನೆಗೆ ಒಪ್ಪಿದ್ದಾರೆ.

5)”ಛಗನ್ ಭುಜಬಲ ಅವರೇ ನೀವೂ ಬೆಳಗಾವಿ ಗಡಿ ಚಳವಳಿಯಲ್ಲಿ ಲಾಠಿ ಏಟು ತಿಂದಿದ್ದೀರಿ. ನಾನೂ ಅಲ್ಲಿ ಕಾರಾಗೃಹ ವಾಸ ಅನುಭವಿಸಿದ್ದೇನೆ” ಎಂದು ಶಿಂದೆ ಹೇಳಿದರು.

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತಾನಾಡುತ್ತ ಒಂದು ಹಂತದಲ್ಲಿ ಸರ್ವೋನ್ನತ ನ್ಯಾಯಾಲಯದಲ್ಲಿ ಗಡಿವಿವಾದ ಪ್ರಕರಣ ಬಾಕಿಯಿದ್ದು
ನಾವು ಅಂಗೀಕರಿಸುವ ನಿರ್ಣಯವು ನ್ಯಾಯಾಂಗ ನಿಂದನೆ ಆಗಬಹುದೆ? ಎಂಬುದನ್ನೂ ಯೋಚಿಸಬೇಕು ಎಂದರು.

ಡಿಸೆಂಬರ್ 14 ರಂದು ಕೇಂದ್ರ ಗೃಹಸಚಿವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ ನಂತರವೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಡಿವಿವಾದವನ್ನು ಮತ್ತೆ ಮತ್ತೆ ಕೆದಕುತ್ತಿದ್ದಾರೆ ಎಂದು ಸದನದಲ್ಲಿ ಮಾತನಾಡಿದ ಮುಖಂಡರು ಆರೋಪಿಸಿದರು.

ಸಭಾಧ್ಯಕ್ಷರು ನಿರ್ಣಯವನ್ನು ಮತಕ್ಕೆ ಹಾಕಿದಾಗ ಸರ್ವಾನುಮತದಿಂದ ಅಂಗೀಕಾರವಾಯಿತು.

*8 ತಿಂಗಳ ಕಾಲ ತಿರುಪತಿ ತಿಮ್ಮಪ ದೇವಸ್ಥಾನದ ಬಾಗಿಲು ಬಂದ್*

https://pragati.taskdun.com/tirupati-timmappatemple6-8months-bandh/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button