Belagavi NewsBelgaum NewsLatest

*ಮಹಾರಾಷ್ಟ್ರಕ್ಕೆ ಬಸ್ ಪುನರಾರಂಭ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಕನ್ನಡ ಮಾತಾಡಿ ಎಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಘಟನೆಯ ನಂತರ ಕರ್ನಾಟ- ಮಹಾರಾಷ್ಟ್ರ ಗಡಿಯಲ್ಲಿ ಕೊಂಚ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಪರಿಸ್ಥಿತಿ ಹತೋಟಿಗೆ ಬಂದ ನಂತರ ಮತ್ತೆ ಮಹಾರಾಷ್ಟ್ರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಪುನಾರಂಭವಾಗಿದೆ.

ಮರಾಠಿ ಹಾಗೂ ಕನ್ನಡ ಭಾಷಿಕರ ನಡುವೆ ತಿಕ್ಕಾಟ ಶುರುವಾಗಿ ಸರ್ಕಾರಿ ಬಸ್‌ಗಳಿಗೆ ಹಾನಿ ಮಾಡಿದ್ದಲ್ಲದೆ ಚಾಲಕರು ನಿರ್ವಾಹಕರಿಗೆ ಮಸಿ ಬಳಿದು ಆಕ್ರೋಶ ಹೊರಹಾಕಲಾಗಿತ್ತು. ಈ ಘಟನೆಗಳ ನಂತರ ಮಹಾರಾಷ್ಟ್ರಕ್ಕೆ ಕರ್ನಾಟಕದ ಬಸ್ ಪ್ರವೇಶ ಬಂದ್‌ ಮಾಡಲಾಗಿತ್ತು.

Home add -Advt

ಈ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮಹಾರಾಷ್ಟ್ರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಪುನಾರಂಭವಾಗಿದೆ. ಕಂಡಕ್ಟರ್ ವಿರುದ್ಧ ದಾಖಲಿಸಿದ ಪೋಕ್ಸೋ ಕೇಸ್ ಹಿಂಪಡೆಯಲಾಗಿದ್ದು, ದೂರು ಕೊಟ್ಟ ಕುಟುಂಬಸ್ಥರಿಗೆ ತಪ್ಪಿನ ಅರಿವಾಗಿದೆ. ಎಲ್ಲವೂ ಸುಖಾಂತ್ಯಗೊಂಡು ಪರಿಸ್ಥಿತಿ ತಿಳಿಗೊಂಡ ಹಿನ್ನೆಲೆಯಲ್ಲಿ ಈಗ ಬಸ್ ಸಂಚಾರ ಪ್ರಾರಂಭಮಾಡಿದ್ದೇವೆ ಎಂದು ತಿಳಿಸಿದರು.

Related Articles

Back to top button