ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಕರ್ನಾಟಕದಲ್ಲಿ ನಡೆದಿರುವ ಬಹುಕೋಟಿ ಐಎಂಎ ಜುವೆಲರ್ಸ್ ಹಗರಣದ ಕುರಿತು ಕೇಂದ್ರ ಸರಕಾರ ಸೂಕ್ತ ತನಿಖೆ ನಡೆಸಬೇಕು ಎಂದು ಕರ್ನಾಟಕದ ಸಂಸದರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಹಗರಣದಲ್ಲಿ ಹಲವಾರು ರಾಜಕಾರಣಿಗಳು, ಉದ್ಯಮಿಗಳೂ ಪಾಲುದಾರರಾಗಿರುವ ಶಂಕೆ ಇದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.
ಶೋಭಾ ಕರಂದ್ಲಾಚೆ, ಜಿ.ಎಂ.ಸಿದ್ದೇಶ, ಪ್ರತಾಪ ಸಿಂಹ, ತೇಜಸ್ವಿ ಸೂರ್ಯ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ