Latest

ಫೆ. 17ರಂದು ರಾಜ್ಯ ಬಜೆಟ್‌: ಮುಖ್ಯಮಂತ್ರಿ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಬರುವ ಫೆ. 17ರಂದು ರಾಜ್ಯದ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಫೆ. 17ರಂದು ರಾಜ್ಯದ 2023-24ನೇ ಸಾಲಿನ ಆಯವ್ಯಯ ಮಂಡನೆ ಮಾಡಲಾಗುವುದು. ಉತ್ತರ ಕರ್ನಾಟಕಕ್ಕೆ ಕೊಡುಗೆ ಏನೆಂಬುದನ್ನು ಕಾದು ನೋಡಿ,” ಎಂದು ಹೇಳುವ ಮೂಲಕ ಹೊಸ ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದ್ದಾರೆ.

“ರಾಜ್ಯದ ಆಯವ್ಯಯ ಮಂಡನೆಗೆ ಸಿದ್ಧತೆ ನಡೆದಿದೆ. ಉತ್ತರ ಕರ್ನಾಟಕಕ್ಕೆ ವಿಶೇಷ ಕೊಡುಗೆಯನ್ನು ಬಜೆಟ್‌ನಲ್ಲೇ ಘೋಷಿಸಲಾಗುವುದು. ಜ.16ರಂದು ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದೇನೆ. ಈ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತ ಯಾವುದೇ ಚರ್ಚೆ ನಡೆಯುತ್ತಿಲ್ಲ,” ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ರಾಜ್ಯಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯ: ಲಕ್ಷ್ಮೀ ಹೆಬ್ಬಾಳಕರ

Home add -Advt

https://pragati.taskdun.com/congress-party-is-indispensable-for-the-state-lakshmi-hebbalakar/

*ಮಹಿಳೆ ಮೇಲೆ ಗ್ಯಾಂಗ್ ರೇಪ್: ವಿಡಿಯೋ ಬಿಡಿಗಡೆ ಮಾಡುವುದಾಗಿ ಬ್ಲ್ಯಾಕ್ ಮೇಲ್; ಮಾಜಿ ಶಾಸಕ, ಐಎ ಎಸ್ ಅಧಿಕಾರಿಗಳ ವಿರುದ್ಧ ಕೇಸ್ ದಾಖಲು*

https://pragati.taskdun.com/ex-mlaias-officergang-rape-casecase-filebiharapatna/

*ಗೃಹ ಸಚಿವರ ಭದ್ರತೆಗೆ ನೇಮಕಗೊಂಡಿದ್ದ ಕಾನ್ಸ್ ಟೇಬಲ್ ಆತ್ಮಹತ್ಯೆಗೆ ಯತ್ನ*

https://pragati.taskdun.com/home-minister-araga-jnanendasecurity-policesuicide-attempt/

Related Articles

Back to top button