ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಭೀತಿ ನಡುವೆ ಇಂದಿನಿಂದ ರಾಜ್ಯ ವಿಧಾನಮಂಡಲ ಅಧಿವೇಶನ ಆರಣ್ಭವಾಗಿದ್ದು, ಕೊವಿಡ್ ಮಾರ್ಗಸೂಚಿಯನ್ನು ಪಾಲಿಸಿ ಕಲಾಪ ಆರಂಭಿಸಲಾಗಿದೆ. ಆದರೆ ಮೊದಲ ದಿನದ ಅಧಿವೇಶಕ್ಕೆ ಹಲವು ಶಾಸಕರು ಗೈರಾಗಿದ್ದಾರೆ.
ಕಲಾಪ ಆರಂಭಕ್ಕೂ ಮುನ್ನ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಸಂಸದ ಅಶೋಕ್ ಗಸ್ತಿ, ಶಾಸಕ ಸತ್ಯನಾರಾಯಣ ಸೇರಿದಂತೆ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ಕೊರೊನಾ ಹಿನ್ನಲೆಯಲ್ಲಿ ಇಂದು ವಿಧಾನಸಭಾ ಕಲಾಪಕ್ಕೆ ಕೇವಲ ಶೇ.30ರಷ್ಟು ಶಾಸಕರು ಮಾತ್ರ ಹಾಜರಾಗಿದ್ದು, 60ಕ್ಕೂ ಹೆಚ್ಚು ಶಾಸಕರು ಗೈರಾಗಿದ್ದಾರೆ. ಡಿಸಿಎಂ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಕೆ.ಗೋಪಾಲಯ್ಯ, ಬೈರತಿ ಬಸವರಾಜು, ಎಂ.ಪಿ.ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್, ಪ್ರಭು ಚವ್ಹಾಣ್, ಶಶಿಕಲಾ ಜೊಲ್ಲೆ, ಎನ್.ಎ. ಹ್ಯಾರಿಸ್, ಎಚ್.ಪಿ. ಮಂಜುನಾಥ, ಬಿ.ನಾರಾಯಣ ರಾವ್, ಡಿ.ಎಸ್. ಹುಲಗೇರಿ, ಪ್ರಿಯಾಂಕ ಖರ್ಗೆ, ಬಿ.ಕೆ. ಸಂಗಮೇಶ, ವೆಂಕಟರಾವ್ ನಾಡಗೌಡ, ಡಿ.ಸಿ.ಗೌರಿಶಂಕರ್, ಕೆ.ಮಹದೇವ್ ಸೇರಿದಂತೆ ಹಲವರು ಕೊರೊನಾ ಸೋಂಕು ಹಿನ್ನಲೆಯಲ್ಲಿ ಐಸೋಲೇಷನ್ನಲ್ಲಿರುವುದರಿಂದ ಅಧಿವೇಶನಕ್ಕೆ ಹಾಜರಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ