Latest

*ಬಿರುಗಾಳಿ ಮಳೆಗೆ ಕೆ.ಆರ್.ಸರ್ಕಲ್ ಅಂಡರ್ ಪಾಸ್ ನಲ್ಲಿ ಮುಳುಗಿದ ಕಾರು; ಕಾರಿನಲ್ಲಿದ್ದ ನಾಲ್ವರ ರಕ್ಷಣೆ; ಇನ್ನಿಬ್ಬರಿಗಾಗಿ ಶೋಧ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿರುಗಾಳಿ, ಗುಡುಗು ಸಹಿತ ಆಲಿಕಲ್ಲು ಮಳೆಯಾಗುತ್ತಿದ್ದು, ಇಡೀ ಬೆಂಗಳೂರು ಮಹಾನಗರ ವರುಣಾರ್ಭಟಕ್ಕೆ ಅಲ್ಲೋಲಕಲ್ಲೋಲವಾಗಿದೆ.

ಬೆಂಗಳೂರಿನ ಪ್ರಮುಖ ರಸ್ತೆಗಳು, ಅಂಡರ್ ಪಾಸ್ ಗಳು ನೋಡ ನೋಡುತ್ತಿದ್ದಂತೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಈ ನಡುವೆ ಕೆ.ಆರ್. ಸರ್ಕಲ್ ನ ಅಂಡರ್ ಪಾಸ್ ನಲ್ಲಿ ತೆರಳುತ್ತಿದ್ದ ಕಾರು ನೀರಿನಲ್ಲಿ ಮುಳುಗಿದೆ.

ಹೈದರಾಬಾದ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ಕುಟುಂಬವೊಂದು ಕಾರಿನಲ್ಲಿ ತೆರಳುತ್ತಿತ್ತು, ಕೆ.ಆರ್.ಸರ್ಕಲ್ ಬಳಿಯ ಅಂಡರ್ ಪಾಸ್ ನಲ್ಲಿ ತೆರಳುತ್ತಿದ್ದಾಗ ಅಂಡರ್ ಪಾಸ್ ನಲ್ಲಿ ಏಕಾಏಕಿ ನೀರು ತುಂಬಿದ್ದು, ಕಾರು ಮುಳುಗಡೆಯಾಗಿದೆ. ಕಾರಿನಲ್ಲಿ ಒಟ್ಟು ಆರು ಜನರಿದ್ದರು. ತಕ್ಷಣ ಸ್ಥಳೀಯರು, ಪೊಲೀಸರು ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದು, ಹರಸಾಹಸಪಟ್ಟು ನಾಲ್ವರನ್ನು ರಕ್ಷಿಸಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.

ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

https://pragati.taskdun.com/d-k-shivakumarnew-cabinetreaction/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button