
ಪ್ರಗತಿವಾಹಿನಿ ಸುದ್ದಿ; ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಘಟ್ಟದ ದಿಬ್ಬಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಆರ್ತಿಬೈಲ್ ಘಾಟ್ ನಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 63ರ ಆರ್ತಿಬೈಲ್ ಘಾಟ್ ನಲ್ಲಿ ಈ ಅಪಘಾತ ಸಂಭವಿಸಿದ್ದು, ಗಾಯಾಳುಗಳು ಬಹುತೇಕ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಪರೀಕ್ಷೆ ನಡೆಯುತ್ತಿರುವುದರಿಂದ ವಿದಾರ್ಥಿಗಳು ಬಸ್ ನಲ್ಲಿ ತುಸು ಮೊದಲೇ ಕಾಲೇಜಿಗೆ ಆಗಮಿಸುತ್ತಿದ್ದಾಗ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ಸ್ವಾತಿ ಸಂತೋಷ ನಾಯ್ಕ(18) ತೆಲಂಗಾರ, ರಂಜನಾ ಜಿ.ಕುಣಬಿ(16) ವಜ್ರಳ್ಳಿ, ಚೈತ್ರಾ ಚಂದ್ರು ಪೂಜಾರ(18) ಹೊನ್ನಗದ್ದೆ, ಸಂದ್ಯಾ ಎಸ್ ಅಂಬೀಗ(18) ಹೊನ್ನಗದ್ದೆ, ರಜನಿ ಮರಾಠೆ(18) ತೆಲಂಗಾರ, ಸ್ವಾತಿ ಗಾಂವ್ಕರ(16) ತೆಲಂಗಾರ, ಅರ್ಪಿತಾ ಭಟ್ಟ(18) ಹೊನಗದ್ದೆ, ಶಿಲ್ಪಾ ಕಳಸ(18) ಕಳಚೆ, ಚೈತನ್ಯ ಪೂಜಾರಿ(18) ಹೊನ್ನಗದ್ದೆ, ಸುನಿತಾ ಕಳಸ(17) ಕಳಚೆ, ಪರಮೇಶ್ವರ ಎನ್.ಭಟ್(65) ಕಳಚೆ, ಸೀತಾರಾಮ ಗೌಡ(42) ಕಳಚೆ ಎಂದು ಗುರುತಿಸಲಾಗಿದೆ.
ಗಾಯಗೊಂಡ ವಿದ್ಯಾರ್ಥಿಗಳು ಸರ್ಕಾರಿ ಪಿಯು ಕಾಲೇಜ್, ವೈಟಿಎಸ್ಎಸ್ ಪಿಯು ಕಾಲೇಜ, ಮದರ್ ತೆರೇಸಾ ಆಂಗ್ಲಮಾಧ್ಯಮ ಶಾಲೆ, ವಿಶ್ವದರ್ಶನ ಪ್ರೌಢಶಾಲೆಗೆ ತೆರಳುವವರು ಆಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.