
ಪ್ರಗತಿವಾಹಿನಿ ಸುದ್ದಿ: ಹಾಸನದ ಹರದನಹಳ್ಳಿ ದೇವಸ್ಥಾನಕ್ಕೆ ತೆರಳಿದ್ದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ದೇವಸ್ಥಾನದ ಬಳಿ ಕಾಲು ಜಾರಿ ಬಿದ್ದಿದ್ದರಿಂದ ಅವರ ಪಕ್ಕೆಲುಬಿಗೆ ತೀವ್ರವಾಗಿ ಪೆಟ್ಟಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಆಷಾಡ ಏಕಾದಶಿ ಪ್ರಯುಕ್ತ ಅವರು ಉಪವಾಸವಿದ್ದರು ಎಂದು ತಿಳಿದು ಬಂದಿದ್ದು, ದೇಗುಲಕ್ಕೆ ತೆರಳಿದ್ದಾಗ ಕಾಲು ಜಾರಿ ಬಿದ್ದು ಪೆಟ್ಟಾಗಿದೆ ಎಂದು ಮೂಲಗಳು ತಿಳಿಸಿವೆ. ಗಾಯಗೊಂಡ ಅವರನ್ನು ಕೂಡಲೇ ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
					
				
					
					
					
					
					
					
					


