ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಕರ್ನಾಟಕದಲ್ಲಿ ರೈಲ್ವೆ ಡಬ್ಲಿಂಗ್ ಹಾಗೂ ಹೊಸ ಯೋಜನೆಗಳಿಗೆ ಹೆಚ್ಚಿನ ಅನುದಾನದ ಬಗ್ಗೆ ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆಯವರ ಪ್ರಶ್ನೆಗೆ ಕೇಂದ್ರ ರೈಲುಮಾರ್ಗಗಳು, ಸಂವಹನಗಳು ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನ್ ವೈಷ್ಣವ ಅವರು ಉತ್ತರ ಪೂರೈಸಿದ್ದಾರೆ.
ರೈಲ್ವೆ ಯೋಜನೆಗಳನ್ನು ರೈಲ್ವೆ ವಲಯಗಳ ಪ್ರಕಾರ ಮಂಜೂರು ಮಾಡಲಾಗುತ್ತಿದೆ ಮತ್ತು ಅದರಂತೆ ಕಾರ್ಯಗತಗೊಳಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಭಾರತೀಯ ರೈಲ್ವೆಯು ವಿವಿಧ ರಾಜ್ಯಗಳ ಗಡಿಗಳನ್ನು ನಿಗದಿಗೊಳಿಸಿದೆ. ಕರ್ನಾಟಕದಲ್ಲಿ 01.04.2021ರ ವರೆಗೆ 4544 ಕಿ.ಮೀ. ಉದ್ದಕ್ಕೆ ರೂ. 56,245 ಕೋಟಿ ವೆಚ್ಚದ 36 ಯೋಜನೆಗಳು ವಿವಿಧ ಹಂತದಲ್ಲಿವೆ. ಅದರಲ್ಲಿ 1193 ಕಿ.ಮೀ. ಉದ್ದವನ್ನು ನಿಯೋಜಿಸಲಾಗಿದೆ ಮತ್ತು ರೂ.15537 ಕೋಟಿ ವೆಚ್ಚ ಮಾರ್ಚ 2021ರ ವರೆಗೆ ಮಾಡಲಾಗಿದೆ.
ಮಾರ್ಚ್ 2021ರ ವರೆಗೆ ರೂ.34154 ಕೋಟಿ ವೆಚ್ಚದಲ್ಲಿ 2583 ಕಿ.ಮಿ. ಉದ್ದದ 21 ಹೊಸ ಯೋಜನೆಗಳು ಅದರಲ್ಲಿ 284 ಕಿ.ಮಿ. ಉದ್ದದ ರೈಲ್ವೆ ಮಾರ್ಗವನ್ನು ಮುಕ್ತಾಯಗೊಳಿಸಿ ರೂ.4803 ಕೋಟಿ ವೆಚ್ಚ ಮಾಡಲಾಗಿದೆ.
1961 ಕಿ.ಮಿ. ಉದ್ದದ ರೂ.22091 ಕೋಟಿ ವೆಚ್ಚದ ರೈಲ್ವೆ 15 ದ್ವಿಗುಣ ಯೋಜನೆಗಳು ಅದರಲ್ಲಿ 909 ಕಿ,ಮಿ. ಉದ್ದದ ರೂ.10734 ವೆಚ್ಚದಲ್ಲಿ ಮಾರ್ಚ 2021ರ ವರೆಗೆ ಕಾರ್ಯಗತಗೊಳಿಸಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಮತ್ತು ಸುರಕ್ಷತಾ ಕಾರ್ಯಗಳಿಗಾಗಿ ವಾರ್ಷಿಕ ಬಜೆಟ್ ಹಂಚಿಕೆ 2009-14 ರ ಅವಧಿಯಲ್ಲಿ ವರ್ಷಕ್ಕೆ ರೂ.835 ಕೋಟಿ ಗಳಿಂದ ವರ್ಷಕ್ಕೆ ರೂ.2702 ಕೋಟಿಗೆ ಹೆಚ್ಚಿಸಲಾಗಿದೆ ಇದ್ದು ಸರಾಸರಿಗಿಂತ 224% ಹೆಚ್ಚಾಗಿದೆ. ಮತ್ತು 2021-11 ಹಣಕಾಸಿನ ವರ್ಷಕ್ಕೆ ಈ ಕೆಲಸಗಳಿಗಾಗಿ ರೂ.4204 ಕೋಟಿ ಮೊತ್ತ ಬಜೆಟನಲ್ಲಿ ಒದಗಿಸಲಾಗಿದೆ ಇದು 2009-14ರ ಸರಾಸರಿ ವಾರ್ಷಿಕ ಬಜೆಟ್ ವೆಚ್ಚಕ್ಕೆ ಹೊಲಿಸಿದರೆ 403% ಹೆಚ್ಚಾಗಿದೆ.
ಕರ್ನಾಟಕ ರಾಜ್ಯದಲ್ಲಿ ಸಂಪೂರ್ಣವಾಗಿ 2014-21 ರ ಅವಧಿಯಲ್ಲಿ 1162 ಕಿ.ಮಿ ಯೋಜನೆಗಳು ಇದರಲ್ಲಿ – 218 ಕಿ.ಮಿ. ನ್ಯೂ ಲೈನ್ ಮತ್ತು 881 ಕಿ,ಮಿ ಡಬಲ್ ಲೈನ್ ಯೋಜನೆಗಳು – ವರ್ಷಕ್ಕೆ ಸರಾಸರಿ 166 ಕಿ.ಮಿ. ದರದಲ್ಲಿ ಕಾರ್ಯಾರಂಭ ಮಾಡಲಾಗಿದೆ. ಇದು ಸರಾಸರಿ ಕಾರ್ಯಾರಂಭಕ್ಕಿಂತ 47% ಹೆಚ್ಚಾಗಿದೆ.
ಸರ್ಕಾರವು ರೈಲು ಯೋಜನೆಗಳ ಪರಿಣಾಮಕಾರಿ ಮತ್ತು ತ್ವರಿತವಾಗಿ ಅನುಷ್ಠಾನಗೊಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ – ಯೋಜನೆಗಳಿಗೆ ಆದ್ಯತೆ, ಹಣ ಹಂಚಿಕೆಯಲ್ಲಿ ಗಣನೀಯ ಹೆಚ್ಚಳ, ಕ್ಷೇತ್ರ ಮಟ್ಟದಲ್ಲಿ ಅಧಿಕಾರಿಗಳ ನಿಯೋಜನೆ, ಪ್ರಗತಿಯ ಮೇಲ್ವಿಚಾರಣೆ, ತ್ವರಿತವಾಗಿ ಭೂಸ್ವಾಧೀಣ ಅರಣ್ಯ ಮತ್ತು ವನ್ಯಜೀವಿ ಅನುಮತಿಗಾಗಿ ಮತ್ತು ಇತರ ಸಮಸ್ಯಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗೊಂದಿಗೆ ನಿಯಮಿತವಾಗಿ ಅನುಸರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾ 3ನೇ ಅಲೆ; ರಾಜ್ಯ ಸರ್ಕಾರದಿಂದ ಹೈ ಅಲರ್ಟ್; ಕರ್ಫ್ಯೂ ಜಾರಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ