Kannada NewsLatestNational

*ಭೀಕರ ಅಪಘಾತ: 12 ಜನ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಸುಮಾರು 50 ಜನ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡು 50 ಅಡಿ ಕಂದಕಕ್ಕೆ ಬಿದ್ದಿದ್ದೆ. ಇದರ ಪರಿಣಾಮ 12 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

ನಿ‌ನ್ನೆ ರಾತ್ರಿ 8:30 ರ ಸುಮಾರಿಗೆ ಛತ್ತೀಸ್ತಢದ ದುರ್ಗ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿರುವ ಕೆಂಪು ಮಣ್ಣಿನ ಗಣಿಗೆ ಬಸ್ ಬಿದ್ದಿದೆ ಎಂದು ತಿಳಿದು ಬಂದಿದೆ.‌ 50 ಅಡಿ ಆಳದ ಕಂದಕಕ್ಕೆ ಬಸ್‌ ಉರುಳಿದ್ದರಿಂದ 12 ಜನರು ಸಾವನ್ನಪ್ಪಿದರೆ 38 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.‌

ಕುಮ್ಹಾರಿ ಪ್ರದೇಶದಲ್ಲಿರುವ ಕೇಡಿಯಾ ಡಿಸ್ಟಿಲರೀಸ್ ಬಸ್ ನಲ್ಲಿ ಸುಮಾರು 45 ಉದ್ಯೋಗಿಗಳು ಇದ್ದರು. ಮಂಗಳವಾರ ರಾತ್ರಿ, 8.30 ರ ಸುಮಾರಿಗೆ ಬಸ್ ಖಾತ್ರಿ ಗ್ರಾಮದ ಬಳಿ ತಲುಪಿದಾಗ ನಿಯಂತ್ರಣ ಕಳೆದುಕೊಂಡು ಗಣಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸ್‌ ತಂಡವನ್ನು ರವಾನಿಸಿ, ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳನ್ನು ಹೊರ ತೆಗೆದು  ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Home add -Advt

Related Articles

Back to top button