ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ ಮಿಸ್ಸಿಂಗ್?

ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ ಮಿಸ್ಸಿಂಗ್?

ಪ್ರಗತಿವಾಹಿನಿ ಸುದ್ದಿ, ಕಾರವಾರ –

ಕಾರವಾರದ ಡಿವೈ ಎಸ್ಪಿ ಶಂಕರ ಮಾರಿಹಾಳ ಭಾನುವಾರ ಸಂಜೆ ನಾಪತ್ತೆೆಯಾಗಿದ್ದಾರೆ ಎನ್ನುವ ದಟ್ಟ ವದಂತಿ ಹರಡಿದೆ. ಅವರು ಯಾರಿಗೂ ಸಂಪರ್ಕಕ್ಕೆ ಸಿಗದೆ ಇರುವುದು ವದಂತಿಗೆ ಪುಷ್ಠಿ ನೀಡಿದ್ದು, ಆತಂಕಕ್ಕೆ ಕಾರಣವಾಗಿದೆ.

ಭಾನುವಾರ ಸಂಜೆ ಸರಕಾರಿ ವಾಹನದಲ್ಲಿ ಕದ್ರಾ ಮತ್ತು ಬಾರೆ ಬಳಿ ಹೋಗಿದ್ದ ಅವರು ಅಲ್ಲೇ ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. ಅವರ ವಾಹನ ಮತ್ತು ಚಾಲಕ ಪತ್ತೆಯಾಗಿದ್ದು, ಮಾರಿಹಾಳ ಜೊತೆಗೆ ಪೊಲೀಸರೊಬ್ಬರು ಸಹ ಇದ್ದಾರೆನ್ನಲಾಗುತ್ತಿದೆ.

Home add -Advt

ಕುಂಬಿಂಗ್ ಕಾರ್ಯಾಚರಣೆಗೋಸ್ಕರ ಅವರು ತೆರಳಿದ್ದರೆನ್ನಲಾಗುತ್ತಿದೆ. ಆದರೆ ಆ ಬಗ್ಗೆ ಯಾವುದೇ ಸ್ಪಷ್ಟ ವಿವರ ಲಭ್ಯವಾಗುತ್ತಿಲ್ಲ. ಕಾಡಿನ ಮಧ್ಯೆ ಸಿಲುಕಿಕೊಂಡು ದಾರಿ ತಪ್ಪಿರುವ ಶಂಕೆಯೂ ಇದೆ.

ಶಂಕರ ಮಾರಿಹಾಳ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿದ್ದು, ಇತ್ತೀಚೆಗಷ್ಟೆ ಅವರಿಗೆ ರಾಷ್ಟ್ರಪತಿ ಪದಕವೂ ಲಭಿಸಿದೆ. ಬೆಳಗಾವಿಯಲ್ಲಿ ಹಲವು ವರ್ಷಗಳ ಕಾಲ ಅವರು ಕೆಲಸ ನಿರ್ವಹಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ಶಂಕರ ಮಾರಿಹಾಳ ಪತ್ತೆಗಾಗಿ ಕಾರ್ಯಾಚರಣೆಗಿಳಿದಿದ್ದಾರೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button