ಪ್ರಗತಿವಾಹಿನಿ ಸುದ್ದಿ; ಡೆಹ್ರಾಡೂನ್: ಪವಿತ್ರ ಯಾತ್ರಾಸ್ಥಳ ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲು ಏಪ್ರಿಲ್ 25ರಿಂದ ತೆರೆಯಲಿದೆ ಎಂದು ತಿಳಿದುಬಂದಿದೆ.
ಮಹಾಶಿವರಾತ್ರಿಯಾದ ಇಂದು ಉಖಿಮಠದಲ್ಲಿ ಸಾಂಪ್ರದಾಯಿಕ ಪೂಜೆ ಬಳಿಕ ಪಂಚಾಂಗದ ಪ್ರಕಾರ ಕೇದಾರನಾಥ ಬಾಗಿಲು ತೆರೆಯಲು ಮುಹೂರ್ತ ನಿಗದಿಪಡಿಸಲಾಯಿತು.
ಏಪ್ರಿಲ್ 25ರಂದು ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಗುವುದು ಎಂದು ಘೋಷಿಸಲಾಯಿತು. ಈ ವರ್ಷ ಮೇಘ ಲಗ್ನದಲ್ಲಿ ಬೆಳಿಗ್ಗೆ 6:20ಕ್ಕೆ ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಿದೆ.
ಕೇದಾರನಾಥ ಬಾಗಿಲು ತೆರೆಯುವ ಮೂಲಕ ಬಾಬಾ ದರ್ಬಾರ್ ನಲ್ಲಿ ಭಕ್ತರ ಆಗಮನ ಆರಂಭವಾಗಲಿದೆ. ಏಪ್ರಿಲ್ 21ರಿಂದಲೇ ಸಾಮ್ಪ್ರದಾಯಿಕ ಪೂಜಾ ವಿಧಿವಿಧಾನಗಳು ಆರಂಭವಾಗಲಿವೆ. ಬಾಬಾ ಕೇದಾರಾರ ಡೋಲಿಯು ಚಳಿಗಾಲದ ಸಿಂಹಾಸನವಾದ ಉಖಿಮಠದ ಓಂಕಾರೇಶ್ವರ ದೇವಾಲಯದಿಂದ ಏ.21ರಂದು ಕೇದಾರನಾಥಕ್ಕೆ ಹೊರಡಲಿದೆ ಏ.24ರಂದು ಕೇದಾರನಾಥ ತಲುಪಲಿದೆ. ಧಾರ್ಮಿಕ ವಿಧಿವಿಧಾನಗಳ ಬಳಿಕ ಏ.25ರಂದು ಕೇದಾರನಾಥ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ.
*ಕಲುಷಿತ ನೀರು ದುರಂತ; ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡು ತನಿಖೆಗೆ ಆದೇಶಿಸಿದ ಲೋಕಾಯುಕ್ತ*
https://pragati.taskdun.com/yadagiricontaminated-waterthree-deathslokayukta/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ