Latest

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿದ 12 ಚೀತಾಗಳು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಭಾರತದಲ್ಲಿ ಸಂಪೂರ್ಣ ನಶಿಸಿ ಹೋಗಿದ್ದ ಚೀತಾ ಸಂತತಿ ಪುನರುಜ್ಜೀವನದ ಕೇಂದ್ರ ಸರಕಾರದ ಎರಡನೇ ಹಂತದ ಯೋಜನೆಯಡಿ
ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ಭಾರತಕ್ಕೆ ತರಲಾಗಿದೆ. 
ದಕ್ಷಿಣ ಆಫ್ರಿಕಾದಿಂದ 12 ಚಿರತೆಗಳನ್ನು ಹೊತ್ತ ಭಾರತೀಯ ವಾಯುಪಡೆಯ ವಿಮಾನ ಮಧ್ಯಪ್ರದೇಶದ ಗ್ವಾಲಿಯರ್ ವಾಯುನೆಲೆಗೆ ಶನಿವಾರ ಬಂದಿಳಿದಿದ್ದು, ಚಿತ್ರಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
“ಚೀತಾ ಸಂಖ್ಯೆಯನ್ನು ವಿಸ್ತರಿಸುವ ಮತ್ತು ದೇಶದಲ್ಲಿ ಮರುಪರಿಚಯಿಸುವ ಉಪಕ್ರಮದ ಭಾಗವಾಗಿ ದಕ್ಷಿಣ ಆಫ್ರಿಕಾವು ಭಾರತಕ್ಕೆ ಚಿರತೆಗಳನ್ನು ಸ್ಥಳಾಂತರಿಸಿರುವುದು ಇದೇ ಮೊದಲು” ಎಂದು ದಕ್ಷಿಣ ಆಫ್ರಿಕಾದ ಅರಣ್ಯ, ಮೀನುಗಾರಿಕೆ ಮತ್ತು ಪರಿಸರ ಇಲಾಖೆ ತಿಳಿಸಿದೆ.
ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಮತ್ತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಶನಿವಾರದಂದು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿರುವ ತಮ್ಮ ಕ್ವಾರಂಟೈನ್ ಆವರಣಗಳಿಗೆ ಚಿರತೆಗಳನ್ನು ಬಿಡುತ್ತಿದ್ದು ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಭಾಗವಹಿಸುತ್ತಿದ್ದಾರೆ.
ಹೊಸ ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನದ ಪರಿಸರಕ್ಕೆ ಹೊಂದಿಕೊಳ್ಳುವ ಕ್ವಾರಂಟೈನ್ ಅವಧಿ ಮುಗಿಸಿದ ನಂತರ ಅರಣ್ಯದಲ್ಲಿ ಸ್ವಚ್ಛಂದ ವಿಹಾರಕ್ಕೆ ಬಿಡುಗಡೆಗೊಳ್ಳಲಿವೆ. ಅಲ್ಲಿಯವರೆಗೆ ಅವುಗಳ ಚಲನವಲನ, ಆರೋಗ್ಯ ಇತ್ಯಾದಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. 
ಈ ಹಿಂದೆ ಮೊದಲ ಹಂತದಲ್ಲಿ ನಮಿಬಿಯಾದಿಂದ ತರಲಾಗಿದ್ದ ಚೀತಾಗಳು ಪ್ರಸ್ತುತ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದು ಬೇಟೆಯಲ್ಲಿ ತೊಡಗಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಮುಖ್ಯಸ್ಥ ಪಿ ಯಾದವ್ ಹೇಳಿದ್ದಾರೆ.

 

*ಅಪ್ರಾಪ್ತ ಬಾಲಕಿ ಮೇಲೆ ಯುವಕನಿಂದ ಆಸಿಡ್ ದಾಳಿ*

Home add -Advt

https://pragati.taskdun.com/acid-attackramanagarayoung-man-arrested/

ಕೆಎಲ್ಎಸ್ ಜಿಐಟಿ ವಿದ್ಯಾರ್ಥಿಗಳ ಸಂಶೋಧನಾ ಪ್ರಬಂಧ ಬಾರ್ಕ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆಯ್ಕೆ

https://pragati.taskdun.com/kls-git-students-research-paper-selected-in-barc-international-conference/

ಅಂಗಡಿಯಲ್ಲಿ ಸಿಲಿಂಡರ್ ಸ್ಫೋಟ: ಅಪಾರ ಹಾನಿ

https://pragati.taskdun.com/cylinder-explosion-in-shop-immense-damage/

Related Articles

Back to top button