ಪ್ರಗತಿವಾಹಿನಿ ಸುದ್ದಿ: ಹೆಲಿಕಾಪ್ಟರ್ ಒಂದು ಹೆಲಿಪ್ಯಾಡ್ ನಿಂದ ಸುಮಾರು 100 ಮೀಟರ್ ದೂರದಲ್ಲಿ ಗಿರಗಿರನೇ ತಿರುಗಿ ಬಳಿಕ ತುರ್ತು ಭೂ ಸ್ಪರ್ಶವಾದ ಘಟನೆ ಕೇದಾರನಾಥದಲ್ಲಿ ನಡೆದಿದೆ.
7 ಜನರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಗ್ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಇದ್ದಕ್ಕಿದ್ದಂತೆ ಕೆಲಹೊತ್ತು ಗಿರಗಿರನೇ ತಿರುಗಲಾರಂಭಿಸಿದೆ. ಲ್ಯಾಂಡಿಂಗ್ ಸ್ಥಳದಲ್ಲಿ ಇದ್ದ ಸಿಬ್ಬಂದಿ ಕಂಗಾಲಾಗಿ ಓಡಿ ಹೋಗಿದ್ದಾರೆ. ಈ ಭಯಂಕರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೇದಾರನಾಥ ಧಾಮಕ್ಕೆ ಬರುತ್ತಿದ್ದ ಕೆಸ್ಟ್ರೆಲ್ ಏವಿಯೇಷನ್ ಕಂಪನಿಗೆ ಸೇರಿದ ಹೆಲಿಕಾಪ್ಟರ್ ಇದಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಹೆಲಿಕಾಪ್ಟರ್ ತಿರುಗಲಾರಂಭಿಸಿದೆ. ಕೆಲ ಹೊತ್ತಿನ ಬಳಿಕ ಹೆಲಿಕಾಪ್ಟರ್ ನ್ನು ತುರ್ತು ಭೂ ಸ್ಪರ್ಶ ಮಾಡಲಾಗಿದ್ದು, ಓರ್ವ ಪೈಲಟ್ ಸೇರಿ 7 ಜನರನ್ನು ರಕ್ಷಿಸಲಾಗಿದೆ. ಎಲ್ಲಾ 7 ಜನರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ