Karnataka News

*ಕೆರೆ ನೀರು ಪಾಲಾಗಿದ್ದ ಇಬ್ಬರು ಮಕ್ಕಳು: ಓರ್ವ ಬಾಲಕನ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರದಿಂದ ಉಮ್ತಾಗಿರುವ ಅನಾಹುತಗಳು ಒಂದೆರಡಲ್ಲ. ಕೆಂಗೇರಿ ಕೆರೆ ನೀರುಪಾಲಾಗಿದ್ದ ಇಬ್ಬರು ಮಕ್ಕಳ ಪೈಕಿ ಓರ್ವ ಬಾಲಕನ ಶವ ಪತ್ತೆಯಾಗಿದೆ.

ಮನೆ ಬಳಿಯೇ ಇದ್ದ ಕೆಂಗೇರಿ ಕೆರೆಗೆ ನೀರು ತರಲೆಂದು ಹೋಗಿದ್ದ ಅಣ್ಣ-ತಂಗಿ ಆಕಸ್ನಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದಿದ್ದರು. ನಾಪತ್ತೆಯಾಗಿದ್ದ ಮಕ್ಕಳಿಗಾಗಿ ನಿನ್ನೆಯಿಂದ ಶೋಧ ಕಾರ್ಯಾಚಾರಣೆ ನಡೆಸಲಾಗುತ್ತಿದೆ. ಇದೀಗ 13 ವರ್ಷ ಬಾಲಕ ಜಾನ್ ಸೀನ ಮೃತದೇಹ ಪತ್ತೆಯಾಗಿದ್ದು, ಕೆರೆಯಿಂದ ಹೊರತೆಗೆಯಲಾಗಿದೆ.

Related Articles

11 ವರ್ಷದ ತಂಗಿ ಮಹಾಲಕ್ಷ್ಮಿಗಾಗಿ ಕೆರೆಯಲ್ಲಿ ಶೋಧ ಕಾರ್ಯ ಮುಂದುವರೆದಿದೆ. ಘಟನಾ ಸ್ಥಳದಲ್ಲಿ ಮಕ್ಕಳನ್ನು ಕಳೆದುಕೊಂಡಿರುವ ತಾಯಿ ನಾಗಮ್ಮ ಅವರ ಆಕ್ರಂದನ ಮುಗಿಲುಮುಟ್ಟಿದೆ.

ಕೆಂಗೇರಿ ಠಾಣೆ ಪೊಲೀಸರು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.

Home add -Advt


Related Articles

Back to top button