Kannada NewsLatestNational

*ಬಾಂಬ್ ಇಟ್ಟಿದ್ದು ನಾನೇ…ತಪ್ಪೊಪ್ಪಿಕೊಂಡ ಶಂಕಿತ ಆರೋಪಿ*

ಪ್ರಗತಿವಾಹಿನಿ ಸುದ್ದಿ; ಎರ್ನಾಕುಲಂ: ಕೇರಳದ ಎರ್ನಾಕುಲಂ ನ ಕನ್ವೆನ್ಷನ್ ಹಾಲ್ ನಲ್ಲಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೋರ್ವ ಪೊಲೀಸರಿಗೆ ಶರಣಾಗಿದ್ದಾನೆ.

ಎರ್ನಾಕುಲಂ ಕನ್ವೆನ್ಷನ್ ಹಾಲ್ ನಲ್ಲಿ ಸ್ಫೋಟದ ಬಳಿಕ ಶಂಕಿತನೊಬ್ಬ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಾಂಬ್ ಇಟ್ಟಿದ್ದು ನಾನೇ ಎಂದು ಶಂಕಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸ್ಫೋಟಕ್ಕೆ ಆರೋಪಿ ಸಾಕ್ಷ್ಯವನ್ನೂ ಒದಗಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರ್ನಾಕುಲಂ ನಲ್ಲಿ ಸಂಭವಿಸಿದಸರಣಿ ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂದಿದ್ದಾರೆ. ಅವರಲ್ಲಿ ಹಲವ ಸ್ಥಿತಿ ಗಂಭೀರವಾಗಿದೆ. ಕಲಮಸ್ಸೆರಿ ಕನ್ವೆನ್ಷನ್ ಹಾಲ್ ನಲ್ಲಿ ಕಳೆದ ಎರಡು ದಿನಗಳಿಂದ ಪ್ರಾರ್ಥನೆ ನಡೆದಿತ್ತು. ಮೂರನೇ ದಿನವಾದ ಇಂದು ಕೊನೇ ದಿನವಾಗಿದ್ದು, 2000ಕ್ಕೂ ಹೆಚ್ಚು ಜನರು ಸೇರಿದ್ದರು. ಪ್ರಾರ್ಥನೆ ಮಾಡುತ್ತಿದ್ದಾಗಲೇ ಸರಣಿ ಸ್ಫೋಟ ಸಂಭವಿಸಿದೆ. ಕೃತ್ಯದ ಹಿಂದೆ ಉಗ್ರರ ಕೈವಾಡ ಶಂಕೆ ವ್ಯಕ್ತವಾಗಿದೆ.


Home add -Advt

Related Articles

Back to top button