Kannada NewsKarnataka NewsLatest

*ಎರಡು ಬೈಕ್ ಗಳ ಮಧ್ಯೆ ಮುಖಾಮುಖಿ ಡಿಕ್ಕಿ; ಯುಟ್ಯೂಬರ್ ಸೇರಿ ಇಬ್ಬರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎರಡು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಬಿಎಸ್ ಎಫ್ ಸಿಬ್ಬಂದಿ ಸುಧಾಕರ್ ಹಾಗೂ ಯುಟ್ಯೂಬರ್ ಗಣಿ ಮೃತ ದುರ್ದೈವಿಗಳು.

Home add -Advt

ಬಿಎಸ್ ಎಫ್ ಸಿಬ್ಬಂದಿ ಸುಧಾಕರ್ ಕೆಲಸ ಮುಗಿಸಿ ಬೈಕ್ ನಲ್ಲಿ ಬಿಎಸ್ ಎಫ್ ಕಾಂಪೌಂಡ್ ನಿಂದ ಹೊರ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬುಲೆಟ್ ಬೈಕ್ ಸುಧಾಕರ್ ಬೈಕ್ ಗೆ ಡಿಕ್ಕಿಹೊಡೆದಿದೆ. ಸುಧಾಕರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಲೆಟ್ ಬೈಕ್ ಸವಾರ ಗಣಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಣಿ ಮೃತಪಟ್ಟಿದ್ದಾರೆ. ಮೃತ ಗಣಿ ಯುಟ್ಯೂಬರ್ ಆಗಿದ್ದರು ಎಂದು ತಿಳಿದುಬಂದಿದೆ.


Related Articles

Back to top button