Latest

ಎಳೆ ಹಸುಳೆಯನ್ನು ಎತ್ತಿ ಬಿಸಾಡಿದ ತಂದೆ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಕುಡಿದ ಮತ್ತಿನಲ್ಲಿ ತಂದೆಯೊಬ್ಬ ತನ್ನ 54 ದಿನದ ಮಗುವನ್ನು ಎತ್ತಿ, ಎಸೆದಿರುವ ಘಟನೆ ಕೇರಳದಲ್ಲಿ ನಡೆದಿದೆ.

ಗಂಭೀರವಾಗಿ ಗಾಯಗೊಂಡ ಹಸುಳೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಕೇರಳದ ಎರ್ನಾಕುಲಂನ ಅಂಗಾಮಲೈ ಎಂಬ ಪ್ರದೇಶದಲ್ಲಿ ನಡೆದಿದೆ.

Home add -Advt

ಸದ್ಯ ಮಗುವನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿನ ತಂದೆ 40 ವರ್ಷದ ಶೈಜು ಥೋಮಸ್, ಆಕಸ್ಮಿಕವಾಗಿ ತನ್ನ ಮಗು ಮಂಚದಿಂದ ಕೆಳಗೆ ಬಿದ್ದ ಪರಿಣಾಮ ಗಾಯಗೊಂಡಿರುವುದಾಗಿ ವೈದ್ಯರ ಬಳಿ ಹೇಳಿದ್ದ. ಆದರೆ, ಆತನ ಹೇಳಿಕೆ ಮೇಲೆ ವೈದ್ಯರಿಗೆ ಅನುಮಾನ ಉಂಟಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಥೋಮಸ್​ನನ್ನು ಬಂಧಿಸಿ ವಿಚಾರಣೆ ನಡೆಸಿದ ಪೊಲೀಸರು, ಕುಡಿದ ಅಮಲಿನಲ್ಲಿ ಮಗುವನ್ನು ಎತ್ತಿ ಎಸೆದ ಪರಿಣಾಮ ಅದು ಮಂಚಕ್ಕೆ ಹೋಗಿ ಬಡಿದಿತ್ತು ಎಂದು ಆತ ಬಾಯ್ಬಿಟ್ಟಿರುವುದಾಗಿ ತಿಳಿಸಿದ್ದಾರೆ. ಕೊಲೆ ಯತ್ನ ಆರೋಪದಡಿ ಥೋಮಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕೋರ್ಟ್ ಥೋಮಸ್​ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Related Articles

Back to top button