
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ದುರ್ಗಾಮಾತಾ ದೌಡ್‌ನಲ್ಲಿ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಭಾಗವಹಿಸಿದರು.
ಶಿವಸ್ಮಾರಕ ಹಾಲು ಮತ್ತು ಬೆಚ್ಚಗಿನ ನೀರಿನಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅಭಿಷೇಕ ಮಾಡಿ, ಪ್ರತಿಮೆಗೆ ಮಾಲೆ ಹಾಕಿ ಹಣೆಗೆ ಅಷ್ಟಗಂಧ ಹಚ್ಚಲಾಯಿತು.
ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಕೇಸರಿ ಧ್ವಜಕ್ಕೆ ಪೂಜೆ ಸಲ್ಲಿಸಿ ದೌಡ್‌ಗೆ ಚಾಲನೆ ನೀಡಲಾಯಿತು. ದೌಡ್ ನಲ್ಲಿ ಭಾಗವಹಿಸಿದವರು ಕೇಸರಿ ಪೇಟಾ ಧರಿಸಿ ಏಕರೂಪದಲ್ಲಿ ಆಕರ್ಶಕವಾಗಿ ಗಮನ ಸೆಳೆದರು.
ಶಿವಸ್ಮಾರಕದಿಂದ ಆರಂಭಗೊಂಡ ದೌಡ್ ಹತ್ತರಗುಂಜಿಯಲ್ಲಿ ಸಮಾರೋಪಗೊಂಡಿತು. ಸಾವಿರಾರು ಮಕ್ಕಳು, ಯುವಕ- ಯುವತಿಯರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದವರು ಭಾಗವಹಿಸಿದ್ದರು.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ