ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಖಾನಾಪುರ ಪಟ್ಟಣದ ಮುಖ್ಯರಸ್ತೆಯ ಲೋಕಮಾನ್ಯ ಭವನದ ಮುಂದುಗಡೆ ನಿಂತಿದ್ದ ಗೂಡ್ಸ್ ವಾಹನದಲ್ಲಿ ಅಪಾರ ಪ್ರಮಾಣದ ವಸ್ತುಗಳನ್ನು ಪತ್ತೆ ಹಚ್ಚಲಾಗಿದ್ದು, ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
280 ಸೀರೆಗಳು , 280 × 550 =1,54,000 ರೂ.
09 ಗೋಡೆ ಗಡಿಯಾರ , 9 × 150 = 1,350 ರೂ.
20 100 pipers 750 ml liquor..15 ltr . .20 × 2418 = 48,360ರೂ.
ಒಟ್ಟೂ ₹ 5,00,000. ವಾಹನ ಸೇರಿ – ₹ 7,03,710.
ಎ .ದಿಲೀಪ್ ಕುಮಾರ್ ಬಿಜೆಪಿ ಮುಖಂಡರು , ಖಾನಾಪುರ ವಿಧಾನಸಭಾ ಕ್ಷೇತ್ರ – ಇವರ ಹೆಸರಿರುವ ಹಾಗೂ ಇವರ ಫೋಟೋ ಇರುವ, ಬಿಜೆಪಿ ಪಕ್ಷದ ಚಿಹ್ನೆ ಇರುವ ಚೀಲಗಳಲ್ಲಿ ವಸ್ತುಗಳಿದ್ದವು.
ಮಿನಿ ಗೂಡ್ಸ್ ವಾಹನದಲ್ಲಿ ಸಂಗಪ್ಪ ಮಲ್ಲಿಕಾರ್ಜುನ್ ಕುಡಚಿ, ಬೆಂಡಿಗೆರೆ ಗ್ರಾಮ ಪಂಚಾಯತ್ ಮೆಂಬರ್ ಇವರು ಬೆಳಗಾವಿ ನಗರದ ಬಾಕ್ಸೈಟ್ ರಸ್ತೆಯ ಬಸ್ ಸ್ಟ್ಯಾಂಡ್ ನಲ್ಲಿದ್ದ ವಸ್ತುಗಳನ್ನು ವಾಹನದಲ್ಲಿ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಲಕ ಲಿಯಾಕತ್ ಅಹ್ಮದ್ ಬಶೀರ್ ನದಾಫ್, ಅಮ್ಮಣ್ಣ ನಗರ ಬೆಳಗಾವಿ ನಗರ ಇವರಿಗೆ ಸೇರಿದ ವಾಹನ.
ಅಧಿಕಾರಿಗಳು ಮುಂದಿನ ಕ್ರಮ ಜರುಗಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ