Karnataka News

*ಏಕಾಏಕಿ ಪಲ್ಟಿಯಾಗಿ ಬಿದ್ದ ಕಾರು: ವ್ಯಕ್ತಿ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧರಿಹನುಮಾನ್ ಕ್ರಾಸ್ ಬಳಿ ನಡೆದಿದೆ.

47 ವರ್ಷದ ಶಿವಕುಮಾರ್ ಪೊಲೀಸ್ ಪಟೀಲ್ ಮೃತ ದುರ್ದೈವಿ. ಔರಾದ್ ನ ಧೂಪತ್ ಮಹಾಗಂವ್ ಗ್ರಾಮದವರು. ಸಂತಪೂರ್ ಕಡೆಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ.

ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಕಾರಿನಡಿ ಸಿಲುಕಿದ ಶಿವಕುಮಾರ್, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಂತಪೂರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button