ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ನಡೆಸುತ್ತಿರುವ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ಸತ್ಯ. ಎಲ್ಲದಕ್ಕೂ ಸುದ್ದಿಗೋಷ್ಠಿಯಲ್ಲೇ ಉತ್ತರ ಕೊಡುತ್ತೇನೆ ಎಂದು ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಕಿಚ್ಚ ಸುದೀಪ್, ಒಂದು ಸ್ಪಷ್ಟನೆ ನೀಡುತ್ತೇನೆ ನಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಯಾರ ಪರವೂ ಟಿಕೆಟ್ ಕೇಳುತ್ತಿಲ್ಲ. ಪಕ್ಷದಿಂದ ನಾನು ಟಿಕೆಟ್ ಕೊಡಿಸುವಷ್ಟು ದೊಡ್ಡವನಲ್ಲ. ಆದರೆ ನಮ್ಮವರಿಗಾಗಿ ಕೆಲ ನಿಲುವು ತೆಗೆದುಕೊಳ್ಳಬೇಕಾಗುತ್ತದೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನನ್ನ ಕಷ್ಟದ ದಿನಗಳಲ್ಲಿ ಕೆಲವರು ನನ್ನ ಪರವಾಗಿ ನಿಂತಿದ್ದರು. ಹಾಗಾಗಿ ಅವರ ಪರವಾಗಿ ನಾನು ನಿಲುವುತೆಗೆದುಕೊಳ್ಳಬೇಕು. ಎಲ್ಲಾ ರಾಜಕೀಯ ಪಕ್ಷದಲ್ಲಿಯೂ ನನ್ನ ಆತ್ಮೀಯರಿದ್ದಾರೆ ಎಂದು ಹೇಳಿದರು.
ಚುನಾವಣಾ ರಾಜಕೀಯಕ್ಕೆ ಬರಲ್ಲ, ಆದರೆ ನನ್ನ ಪರವಾಗಿ ನಿಂತಿದ್ದವರ ಪರವಾಗಿ ನಾನು ನಿಲ್ಲುತ್ತೇನೆ. ಎಲ್ಲಾ ರಾಜಕೀಯ ಪಕ್ಷದಲ್ಲೂ ಆತ್ಮೀಯರಿದ್ದಾರೆ ಕೇವಲ ಬಿಜೆಪಿಗೆ ಮಾತ್ರ ನಾನು ಸೀಮಿತವಲ್ಲ ಎಂದು ಹೇಳಿದರು.
ಇದೇ ವೇಳೆ ಅನಾಮಧೇಯ ವ್ಯಕ್ತಿಯಿಂದ ಬೆದರಿಕೆ ಪತ್ರ ವಿಚಾರವಾಗಿ, ಚಿತ್ರರಂಗದಲ್ಲಿ ಕೆಲವರು ನನ್ನ ಕಂಡರೆ ಆಗದವರೂ ಇದ್ದಾರೆ. ಇಂತಹ ಬೆದರಿಕೆಗಳಿಗೆಲ್ಲ ನಾನು ಹೆದರಲ್ಲ. ಬೆದರಿಕೆ ಪತ್ರ ಬರೆದವರು ಯಾರೆಂದು ಗೊತ್ತು ಅವರ ಬಗ್ಗೆ ಈಗ ನಾನು ಮಾತನಾಡಲ್ಲ, ಅವರಿಗೆ ಹೇಗೆ ಉತ್ತರ ಕೊಡಬೇಕೋ ಹಾಗೆ ಅವರ ಮಾರ್ಗದಲ್ಲೇ ಉತ್ತರ ಕೊಡುತ್ತೇನೆ ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ