Kannada NewsKarnataka News

ಆಸ್ತಿಗಾಗಿ ಬಡಿದು ಕೊಂದರು; ಕೊಂದಿದ್ಯಾರನ್ನು ಗೊತ್ತೆ?

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಲಮಕ್ಕಳ ನಡುವೆ ಉದ್ಭವಿಸಿದ ಆಸ್ತಿ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ತಂದೆಯ ವಿರುದ್ಧ ಸಿಟ್ಟಿಗೆದ್ದ ಮೊದಲ ಪತ್ನಿಯ ಮಗ ತನ್ನ ಸೋದರಮಾವನೊಂದಿಗೆ ಸೇರಿ ಹೆತ್ತ ತಂದೆಯನ್ನೇ ಕೊಲೆ ಮಾಡಿದ ಘಟನೆ ಶನಿವಾರ ತಾಲ್ಲೂಕಿನ ಹಿರೇ ಅಂಗ್ರೊಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಹಿರೇ ಅಂಗ್ರೊಳ್ಳಿ ಗ್ರಾಮದ ಬಸವರಾಜ ವೀರಭದ್ರಪ್ಪ ಮುನವಳ್ಳಿ (52) ಮೃತ ವ್ಯಕ್ತಿ.
ಮೃತ ಬಸವರಾಜ ಅವರಿಗೆ ಇಬ್ಬರು ಪತ್ನಿಯರಿದ್ದು, ಅವರ ಆಸ್ತಿ ಹಂಚಿಕೆ ವಿಚಾರದಲ್ಲಿ
ಇಬ್ಬರೂ ಪತ್ನಿಯರ ಮಕ್ಕಳಲ್ಲಿ ಭಿನ್ನಾಭಿಪ್ರಾಯವಿತ್ತು. ಇದೇ ಕಾರಣಕ್ಕೆ ಶನಿವಾರ ತಮ್ಮ
ಪತಿಯನ್ನು ಅವರ ಮೊದಲ ಪತ್ನಿಯ ಮಗ ರವಿರಾಜ ಬಸವರಾಜ ಮುನವಳ್ಳಿ ಮತ್ತು ಆತನ ಸೋದರಮಾವ (ಮೊದಲ ಪತ್ನಿಯ ತಮ್ಮ) ಮಹಾಬಳೇಶ್ವರ ಸಂಗಪ್ಪ ಉಳ್ಳಾಗಡ್ಡಿ ಸೇರಿ ಮ್ಯಾರಕೋಲ ಮತ್ತು ಬಡಿಗೆಯ ಸಹಾಯದಿಂದ ತಲೆಗೆ ಮತ್ತು ದೇಹಕ್ಕೆ ಬಲವಾಗಿ ಹೊಡೆದು ಕೊಲೆಗೈದಿದ್ದಾರೆ ಎಂದು ಆರೋಪಿಸಿರುವ ಮೃತರ ಎರಡನೇ ಪತ್ನಿ ನಂದಾ ಬಸವರಾಜ ಮುನವಳ್ಳಿ ಬಸವರಾಜ ಮತ್ತು ಮಹಾಬಳೇಶ್ವರ ಅವರ ವಿರುದ್ಧ ನಂದಗಡ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 302, 504 ಮತ್ತು 506ರಡಿ ದೂರು ದಾಖಲಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಸಿಪಿಐ ಸುರೇಶ ಶಿಂಗಿ ಹಾಗೂ
ಪೊಲೀಸರು ಈ ಘಟನೆಯ ಕುರಿತು ತನಿಖೆ ಕೈಗೊಂಡಿದ್ದಾರೆ. ನಂದಗಡ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button