Kannada NewsKarnataka NewsLatest

ಗೋವಾದಿಂದ ಆಕ್ಸಿಜನ್ ತಂದ ಕಿರಣ ಜಾಧವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಿಜೆಪಿ ಹಿಂದುಳಿದ ವರ್ಗಗಳ ವೇದಿಕೆ ರಾಜ್ಯ ಕಾರ್ಯದರ್ಶಿ ಕಿರಣ ಜಾಧವ ಬೆಳಗಾವಿಗೆ ಗೋವಾದಿಂದ ಗುರುವಾರ 64 ಜಂಬೋ ಸಿಲಿಂಡರ್ ತರಿಸಿದ್ದು, ವಿವಿಧ ಆಸ್ಪತ್ರೆಗಳಿಗೆ ಹಂಚಿಕೆ ಮಾಡಿದ್ದಾರೆ.

ಶುಕ್ರವಾರ ಹಾಗೂ ಶನಿವಾರ ಇನ್ನಷ್ಟು ಸಿಲೆಂಡರ್ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಬೆಳಗಾವಿಯಲ್ಲಿ ಕರೋನಾಎಲ್ಲಡೆ  ವ್ಯಾಪಿಸುತ್ತಿದೆ. ಎಲ್ಲೆಡೆ ಆಕ್ಸೆಜೆನ್ ಕೊರತೆ ಉಂಟಾಗಿದೆ.  ಈ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿ ಬೆಳಗಾವಿಯ ಬಿಜೆಪಿ ಮುಖಂಡ ಮತ್ತು ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ  ಕಿರಣ ಜಾಧವ ಗೋವಾ ಆಡಳಿತವನ್ನು ಸಂಪರ್ಕಿಸಿ ಇಲ್ಲಿನ ಪರಿಸ್ಥಿತಿಯನ್ನು ಅವರ ಗಮನಕ್ಕೆ ತಂದು ಆಕ್ಷಿಜೆನ ಸಿಲಿಂಡರಗಳನ್ನು ತುಂಬಿಕೊಂಡು ಬಂದಿದ್ದಾರೆ.

ಇದಕ್ಕಾಗಿ ಬೆಳಗಾವಿಯ ಪಾರುಲೆಕರ್ & ಕಂಪನಿ ತಮ್ಮ ಖಾಲಿ ಸಿಲಿಂಡರ್‌ಗಳನ್ನು ಒದಗಿಸಿದ್ದಾರೆ.  ಈ ಅಕ್ಸೆಜೆನ ಸಿಲಿಂಡರ್‌ಗಳನ್ನು ಬೆಳಗಾವಿಯಲ್ಲಿನ ವಿವಿಧ ಆಸ್ಪತ್ರೆಗಳ ರೋಗಿಗಳಿಗೆ ವಿತರಿಸಲಾಗಿದೆ.

Home add -Advt

ಗುರುವಾರ 64 ಜಂಬೋ ಸಿಲೆಂಡರ್ ತರಲಾಗಿದೆ. ಮಿಲ್ಟ್ರಿ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳಿಗೆ ಒದಗಿಸಲಾಗಿದೆ. ಶುಕ್ರವಾರ ಇನ್ನಷ್ಟು ತರಲಾಗುವುದು ಎಂದು ಕಿರಣ ಜಾಧವ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಮಾರ್ಗಸೂಚಿ ಉಲ್ಲಂಘಿಸಿದರೆ ಕೇಸ್ ದಾಖಲು

Related Articles

Back to top button