Kannada NewsLatestNational
*ಗಾಳಿಪಟದ ದಾರ ತಪ್ಪಿಸಲು ಹೋಗಿ ದುರಂತ: ಸೇತುವೆಯಿಂದ ಕೆಳಗೆ ಬಿದ್ದು ಒಂದೇ ಕುಟುಂಬದ ಮೂವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಬೈಕ್ ನಲ್ಲಿ ಬರುತ್ತಿದ್ದ ಕುಟುಂಬ ಗಾಳಿಪಟದ ದಾರ ತಪ್ಪಿಸಲು ಹೋಗಿ ಸೇತುವೆಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ವ್ಯಕ್ತಿಯೋರ್ವರು ಪತ್ನಿ, ಮಗಳ ಜೊತೆ ಬೈಕ್ ನಲ್ಲಿ ಬರುತ್ತಿದ್ದಾಗ ಗಾಳಿಪಟದ ದಾರ ತಪ್ಪಿಸಲು ಹೋಗಿ ಸೇತುವೆಯಿಂದ ಕೆಳಗೆ ಬಿದ್ದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಜರಾತ್ ನ ಸೂರತ್ ನಲ್ಲಿ ಈ ಘಟನೆ ನಡೆದಿದೆ.
35 ವರ್ಷದ ರೆಹಾನ್ ರಹೀಮ್ ಶೇಖ್, ಪತ್ನಿ ರೆಹನಾ ಹಾಗೂ 10 ವರ್ಷದ ಮಗಳು ಅಲಿಶಾ ಮೃತ ದುರ್ದೈವಿಗಳು. ಬೈಕ್ ನಲ್ಲಿ ಹೋಗುವಾಗ ಗಾಳಿಪಟವೊಂದರ ದಾರ ಅವರ ಎದುರೇ ಬರುತ್ತಿತ್ತು. ಅದನ್ನು ತಪ್ಪಿಸಲು ಹೋಗಿ ಬೈಕ್ ಸೇತುವೆಗೆ ಡಿಕ್ಕಿ ಹೊಡೆದು ಮೂವರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



