*ಕಿತ್ತೂರು ಉತ್ಸವಕ್ಕೆ ಚಾಲನೆ: ಅದ್ಧೂರಿ ಮೆರವಣಿಗೆ: ಮನಸೆಳೆದ ಆಕರ್ಷಕ ಜಾನಪದ ಕಲಾವಾಹಿನಿಗಳು*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ಕಿತ್ತೂರು ಚನ್ನಮ್ಮ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ವಿಜಯ ಪತಾಕೆ ಹಾರಿಸಿದ ಸವಿನೆನಪಿನಲ್ಲಿ ಆಚರಿಸಲಾಗುತ್ತಿರುವ ಚನ್ನಮ್ಮನ ಕಿತ್ತೂರು ಉತ್ಸವವು ತುಂತುರು ಮಳೆಯ ಮಧ್ಯೆಯೇ ಸಡಗರ-ಸಂಭ್ರಮದಿಂದ ಆರಂಭಗೊಂಡಿತು.
ಚನ್ನಮ್ಮನ ವಿಜಯದ ದ್ಯೋತಕವಾಗಿ ರಾಜ್ಯದಾದ್ಯಂತ ಸಂಚರಿಸಿದ ವಿಜಯ ಜ್ಯೋತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಚನ್ನಮ್ಮ ವೃತ್ತದಲ್ಲಿ ಬರಮಾಡಿಕೊಂಡು ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರವೇರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರ ಬಾಳಪ್ಪ ಅವರ ಪುತ್ಥಳಿಗಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.
ಚನ್ನಮ್ಮನ ಕಿತ್ತೂರು ಶಾಸಕರಾದ ಬಾಬಾಸಾಹೇಬ್ ಪಾಟೀಲ, ಬೆಳಗಾವಿ ಉತ್ತರ ಶಾಸಕರಾದ ಆಸಿಫ್(ರಾಜು) ಸೇರ್, ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ್ ಮತ್ತಿತರರು ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಪ್ರತಿವರ್ಷದಂತೆ ಗಡಾದಮರಡಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಕಿತ್ತೂರು ಉತ್ಸವದ ಉದ್ಘಾಟನಾ ಧ್ವಜಾರೋಹಣ ಮಾಡಿದರು.
ಆಕರ್ಷಕ ಜಾನಪದ ಕಲಾವಾಹಿನಿ

ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಅತ್ಯಾಕರ್ಷಕ ಜಾನಪದ ಕಲಾವಾಹಿನಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಚನ್ನಮ್ಮನ ಕಿತ್ತೂರಿನ ಚನ್ನಮ್ಮ ವೃತ್ತದಲ್ಲಿ ಚಾಲನೆ ನೀಡಿದರು.
ಅಲ್ಲಿಂದ ಆರಂಭಗೊಂಡ ಜಾನಪದ ಕಲಾವಾಹಿನಿಯು ನಾಡಿನ ಜಾನಪದ ಕಲಾವೈಭವವನ್ನು ಅನಾವರಣಗೊಳಿಸಿತು. ಡೊಳ್ಳುಕುಣಿತ, ಪುರವಂತಿಕೆ, ಜಗ್ಗಲಗಿ, ಕರಡಿ ಮಜಲು, ಸಂಬಳ ವಾದನ, ಹಲಗೆ ವಾದನ, ಹೆಜ್ಜೆ ಮೇಳ, ತಾಸೇವಾದನ, ಗೊಂಬೆ ಕುಣಿತ, ಮೈಸೂರು ನಗಾರಿ, ಮಹಿಳಾ ನಗಾರಿ, ನಂದಿ ಧ್ವಜ, ಕಂಸಾಳೆ, ಚಂಡೆ ವಾದನ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಕ ಮೆರವಣಿಗೆಗೆ ಮೆರಗು ನೀಡಿದವು.
ಮಳೆಯ ನಡುವೆಯೂ ಆಕರ್ಷಕ ಜಾನಪದ ಕಲಾವಾಹಿನಿಗಳೊಂದಿಗೆ ಸಾಗಿದ ವಿವಿಧ ಇಲಾಖೆಗಳಿಂದ ನೀಡಲಾಗುವ ಸರಕಾರದ ಯೋಜನೆ, ಸೌಲಭ್ಯಗಳ ಸ್ತಬ್ದ ಚಿತ್ರಗಳು ನೆರೆದ ಜನಸ್ತೋಮದ ಗಮನ ಸೆಳೆದವು.
ವಸ್ತುಪ್ರದರ್ಶನ ಮಳಿಗೆ
ಕೋಟೆ ಆವರಣದಲ್ಲಿ ಸ್ಥಾಪಿಸಲಾಗಿರುವ ವಸ್ತುಪ್ರದರ್ಶನ ಮಳಿಗೆ, ಫಲಪುಷ್ಪ ಪ್ರದರ್ಶನವನ್ನು ಗಣ್ಯರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ರಾಜ್ಯ ಹಣಕಾಸು ಸಂಸ್ಥೆ ಅಧ್ಯಕ್ಷರಾದ ಮಹಾಂತೇಶ ಕೌಜಲಗಿ, ಶಾಸಕರಾದ ಬಾಬಾಸಾಹೇಬ್ ಪಾಟೀಲ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ ಶಿಂಧೆ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಕೃಷಿ, ಆರೋಗ್ಯ, ತೋಟಗಾರಿಕೆಗೆ ಸಂಬಂಧಿಸಿದಂತೆ 121 ವಸ್ತು ಪ್ರದರ್ಶನ ಮಳಿಗೆಗಳು ಹಾಗೂ 37 ವಿವಿಧ ನಮೂನೆಯ ಆಹಾರ ಮಳಿಗೆಗಳನ್ನು ಸ್ಥಾಪಿಸಲಾಗಿರುತ್ತದೆ.
ದೀಪಾವಳಿ ಹಾಗೂ ಉತ್ಸವದ ಹಿನ್ನೆಲೆಯಲ್ಲಿ ಕಿತ್ತೂರು ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಮಳೆಯನ್ನು ಲೆಕ್ಕಿಸದೇ ಬೆಳಗ್ಗೆಯಿಂದಲೇ ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡುವ ಮೂಲಕ ಉತ್ಸವದ ಮೆರಗು ಹೆಚ್ಚಿಸಿದರು.
೨೦೧ನೇ ವರ್ಷದ ಕಿತ್ತೂರು ಉತ್ಸವದ ಸಂಭ್ರಮ: ಕಿತ್ತೂರು ರಾಣಿ ಸಂಸ್ಥಾನದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
೨೦೧ನೇ ವರ್ಷದ ಕಿತ್ತೂರು ಉತ್ಸವ ಸಂಭ್ರಮದ ನಿಮಿತ್ತವಾಗಿ ಶುಕ್ರವಾರ (ಅ.೨೪) ಕೋಟೆ ಅವರಣದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮಾ ವೇದಿಕೆಯಲ್ಲಿ ಬೆಳಿಗ್ಗೆ ೧೦ ರಿಂದ ೧ ಗಂಟೆಯವರೆಗೆ ಕಿತ್ತೂರು ರಾಣಿ ಸಂಸ್ಥಾನದ ಕುರಿತು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಚಿಕ್ಕೋಡಿ ಲೋಕಸಭಾ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಆಂಗ್ಲ ಭಾಷಾ ಲೇಖಕರು ಹಾಗೂ ವಿದ್ವಾಂಸರಾದ ಡಾ.ವಿಜಯಲಕ್ಷ್ಮೀ ತಿರ್ಲಾಪೂರ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ರಾಣಿ ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕರಾದ ಡಾ.ನಾಗರತ್ನಾ ಪರಾಂಡೆ ಅವರು ಆಶಯ ನುಡಿಯನ್ನು ನುಡಿಯಲಿದ್ದಾರೆ.
ಕಿತ್ತೂರು ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ವಿಷಯ ಕುರಿತು ಸಾಹಿತಿಗಳಾದ ಡಾ.ನಿರ್ಮಲಾ ಬಟ್ಟಲ, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ರಾಣಿ ಚನ್ನಮ್ಮಳ ಆದರ್ಶಗಳು ವಿಷಯದ ಕುರಿತು ಡಾ. ಅರ್ಚನಾ ಅಥಣಿ, ಕಿತ್ತೂರು ಸಂಸ್ಥಾನದ ರಾಣಿಯರ ಸಮನ್ವಯತೆ ಸಂದೇಶ ವಿಷಯದ ಕುರಿತು ಜ್ಯೋತಿ ಬದಾಮಿ ಹಾಗೂ ಕಿತ್ತೂರು ಸಂಸ್ಥಾನದ ದತ್ತಕ ಪ್ರಕ್ರಿಯೆಯಲ್ಲಿ ರಾಣಿಯರ ಪಾತ್ರ ಎಂಬ ವಿಷಯದ ಕುರಿತು ನಿವೃತ್ತ ಪ್ರಾಚಾರ್ಯರಾದ ಡಾ.ಸರಸ್ವತಿ ಕಳಸದ ಅವರು ರಾಜ್ಯ ಮಟ್ಟದ ಮಹಿಳಾ ವಿಚಾರ ಗೋಷ್ಠಿ ಮಾಡಲಿದ್ದಾರೆ.
ಅಕ್ಟೋಬರ್ ೨೪ರ ಸಾಂಸ್ಕೃತಿಕ ಕಾರ್ಯಕ್ರಮಗಳು: ಕೋಟೆ ಅವರಣದಲ್ಲಿನ ಕಿತ್ತೂರು ಚನ್ನಮ್ಮನ ವೇದಿಕೆಯಲ್ಲಿ ಮಧ್ಯಾಹ್ನ ೩ ಗಂಟೆಯಿಂದ ೮.೧೫ ರವರೆಗೆ ಗಾನಗಾರುಡಿ ಬಸಲಿಂಗಯ್ಯ ಹಿರೇಮಠ ಪ್ರತಿಷ್ಠಾನ, ಬೈಲೂರ ತಂಡದಿಂದ ಲಾವಣಿ ಪದ, ಜ್ಯೋತಿಲಿಂಗ ಹೊನಕಟ್ಟಿ ಮತ್ತು ತಂಡದವರಿಂದ ಜಾನಪದ ಸಂಗೀತ, ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ರವರಿಂದ ನೃತ್ಯ ರೂಪಕ, ಶಂಭಯ್ಯ ಹಿರೇಮಠ ರವರಿಂದ ಜನಪದ ಸಂಗೀತ, ವೆಂಕಟೇಶ ಆಲಕೋಡ ರವರಿಂದ ವಚನ ಸಂಗೀತ, ಪುಷ್ಪಲತಾ ಹಿರೇಮಠ ರವರಿಂದ ಸಂಗೀತ, ಕಲ್ಮೇಶ್ವರ ಜಾನಪದ ಕಲಾ ತಂಡದಿಂದ ಜೊಗತಿ ನೃತ್ಯ, ಉಮೇಶ ಪತ್ತಾರ ರವರಿಂದ ಸುಗಮ ಸಂಗೀತ, ಶೃತಿಪ್ರಿಯಾ ಅಕಾಡೆಮಿ ಆಫ್ ಡ್ಯಾನ್ಸ್ ರವರಿಂದ ನೃತ್ಯ ರೂಪಕ, ಹಡಪದ ಅಪ್ಪಣ್ಣ, ನಯನ, ಹಿತೇಶ, ಸೂರ್ಯಕಾಂತ ಕುಂದಾಪೂರ, ಸದಾನಂದ, ಭವ್ಯ, ದಾನಪ್ಪ ರವರಿಂದ ಹಾಸ್ಯ ಸಂಜೆ, ಬಸವರಾಜ ಬಂಟನೂರ ರವರಿಂದ ವಚನ ಸಂಗೀತ, ಮಂಜುನಾಥ ಹುಡೇದ, ಪ್ರವೀಣ, ಕೆ.ಆರ್.ಪೇಟೆ ಶಿವು ಮತ್ತು ಸುಜಾತಾ ರವರಿಂದ ರಸಮಂಜರಿ, ರೆಮಿಂದ ಖುರಾನಾ ಖ್ಯಾತ ಒಡಿಸಿ ಡ್ಯಾನ್ಸರ್, ರವಿ ಮಾಸ್ಟರ್ ಜೀ ಟಿ.ವಿ. ಕೊರಿಯೋಗ್ರಾಫರ್ ನೃತ್ಯ ವೈವಿದ್ಯ, ಆಲ್ ಓಕೆ ಲೈವ್ ಮ್ಯೂಸಿಕ ತಂಡ ( ಚಲನಚಿತ್ರ ತಾರೆಯರು ಝಯದಖಾನ ಮತ್ತು ಮಲೈಕಾ) ರವರಿಂದ ರಸಮಂಜರಿ ನಂತರ ೮.೧೫ ರಿಂದ ಸ.ರಿ.ಗ.ಮ.ಪ ತಂಡ ಬೆಂಗಳೂರು ರವರಿಂದ ರಸಮಂಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿನ ಸರದಾರ ಗುರುಸಿದ್ದಪ್ಪ ವೇದಿಕೆಯಲ್ಲಿ ಗ್ಯಾನಪ್ಪ ಭಜಂತ್ರಿ ಕ್ಲಾರಿಯೋನೆಟ್, ಜಗದೀಶ ಮಹಾಂತೇಶ ಕರಡಿಗುದ್ದಿ ಸಾ/ಏಣಗಿ ರವರಿಂದ ಭಜನೆ, ಈರಣ್ಣ ಶಿವಪುತ್ರ ಬಡಿಗೇರ ಸಾ/ಕಪ್ಪಲಗುದ್ದಿ ಸುಗಮ ಸಂಗೀತ, ವಸಂತ ಭಜಂತ್ರಿ ಚ. ಕಿತ್ತೂರು ರವರಿಂದ ವಾದ್ಯ ಸಂಗೀತ, ದ್ರಾವ್ಯಾ ಸಿ. ಕಮ್ಮಾರ ರವರಿಂದ ಭರತನಾಟ್ಯ, ಮಲ್ಲಿಕಾರ್ಜುನ ಭಜನೆ ಜಾನಪದ ಕಲಾ ಸಂಘ ಸಾ/ಕುರುಬಗಟ್ಟಿ ರವರಿಂದ ಭಜನೆ, ದುರ್ಗಪ್ಪಾ ಮರೆಪ್ಪಗೊಳಸಾ/ಖನಗಾಂವಿ ರವರಿಂದ ಡೊಳ್ಳಿನ ಪದ, ಇಶಾ ಅ ಪಠಾಣ ರವರಿಂದ ಭರತನಾಟ್ಯ, ಶ್ಯಾವಳಿಗೇಪ್ಪ, ವಿಜಯನಗರ ರವರಿಂದ ಸುಗಮ ಸಂಗೀತ, ಆಶಾದೀಪ ಸಮುದಾಯ ಕಲಾಕೇಂದ್ರ, ಚಿಕ್ಕೋಡಿ ರವರಿಂದ ಜಾನಪದ ಗಾಯನ, ಕರೆಪ್ಪ ಗದಿಗೆಪ್ಪ ಬನ್ನೂರ ಸಾ/ಸಿಂಗಾರಗೊಪ್ಪ ರವರಿಂದ ಭಜನೆ, ನಟನಾ ನಾಟ್ಯ ಸೇವಾ ಸಂಸ್ಥೆ ಕಾದರವಳ್ಳಿ ರವರಿಂದ ನೃತ್ಯ, ಸುರೇಶ ನಾಗಪ್ಪಾ ಮೋಕಾಶಿ ಹುಲಿಕಟ್ಟಿ ರವರಿಂದ ಗಾಯನ, ವಾಯುಪುತ್ರ ಮೆಲೋಡಿಸ ಬೈಲಹೊಂಗಲ ರವರಿಂದ ಸಂಗೀತ, ಮಧುರಾ ಸಂಪಗಾವಿ ಮತ್ತು ತಂಡದಿಂದ ನೃತ್ಯ ರೂಪಕ, ಮಾಂತೇಶ ಶಿವಪ್ಪಾ ಮುದಕಗೌಡರ ರವರಿಂದ ಗಾಯನ, ವಾಣಿಶ್ರೀ ರವರಿಂದ ರೂಪಕ, ಗೋಪಾಲ ಕಲ್ಲಪ್ಪಾ ಚಪಣಿ ಸಾ/ಯಮಕನಮರಡಿ ರವರಿಂದ ಭಜನೆ, ಈಶ್ವರ ಗಡಿಬಿಡಿ ಸಾ/ಚ ಕಿತ್ತೂರು ರವರಿಂದ ವಚನ ಗಾಯನ ವಿರಪ್ಪ ಅನಿಗೋಳ ರವರಿಂದ ತತ್ವಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕಿತ್ತೂರು ರಾಣಿ ಚನ್ನಮ್ಮ ಸಭಾಭವನ. ಚನ್ನಮ್ಮ ವೃತ್ತದಲ್ಲಿನ ಅಮಟೂರು ಬಾಳಪ್ಪ ವೇದಿಕೆಯಲ್ಲಿ ಮಧ್ಯಾಹ್ನ ೪ ಗಂಟೆಯಿಂದ ರಾತ್ರಿ ೯ ರವರೆಗೆ ಬಸವರಾಜ ಭಜಂತ್ರಿ, ಬಾಗಲಕೋಟೆ ರವರಿಂದ ಶಹನಾಯಿ, ಬೀರಲಿಂಗೇಶ್ವ ಡೊಳ್ಳಿನ ಕಲಾ ಸಂಘದಿಂದ ಭಜನೆ, ಗ್ರಾಮ ದೇವತೆ ಭಜನಾ ಮಂಡಳಿ ತಿಗಡೊಳ್ಳಿ ರವರಿಂದ ಭಜನೆ, ಬಸವೇಶ್ವರ ಭಜನಾ ಮಂಡಳಿ ನಿಚ್ಚನಿಕೆ ರವರಿಂದ ಭಜನೆ, ಮಲ್ಲಿಕಾರ್ಜುನ ನೇಗಿನಹಾಳ ರವರಿಂದ ಸುಗಮ ಸಂಗೀತ, ದಯಾನಂದ ಚಿಕ್ಕಮಠ ಬೈಲಹೊಂಗಲ ರವರಿಂದ ಏಕ ಪಾತ್ರಾಭಿನಯ, ಇಚಿತಾ ಮಡಕೇರಿ ರವರಿಂದ ಭರತನಾಟ್ಯ, ಸಂಜು ಮರಗನ್ನವರ ಕಲ್ಲೋಳಿ ರವರಿಂದ ತತ್ತ್ವಪದ, ಯಲ್ಲವ್ವ ಕುಳ್ಳೂರು ರವರಿಂದ ಗೀ ಗೀ ಪದ, ಸುರೇಶ ಶಿವಾನಂದ ಹರಕುಣಿ ಸಾ/ಎತ್ತಿನಕೇರಿ ರವರಿಂದ ನೃತ್ಯ ರೂಪಕ, ಸೋಮನಗೌಡ ಬ ಗೌಡರ ಸಾ/ನಾಗನೂರ ರವರಿಂದ ಭಜನೆ, ಕವನ ಮಲ್ಲಿಕಾರ್ಜುನ ಕಳಸಣ್ಣವರ ಸಾ/ಕದ್ರೋಳ್ಳಿ ರವರಿಂದ ಭರತನಾಟ್ಯ, ಪಾಂಡುರಂಗ ಭಜನಾ ಮಂಡಳಿ ಸಾ/ಬೈಲೂರು ರವರಿಂದ ಭಜನೆ, ಈರಪ್ಪ ಗುರಸಿದ್ದಪ್ಪ ಬಬ್ಲಿ ಸಾ/ಬಸಪೂರ ರವರಿಂದ ಭಜನೆ, ಪ್ರಿಯಾಂಕಾ ಸಂ. ತಿಲಗಾರ ರವರಿಂದ ಭಕ್ತಿಗೀತೆ, ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ರವರಿಂದ ಜಾನಪದ ಗೀತೆ, ಶಿವರಾಜ ನಾಯಕ ರವರಿಂದ ಹರಿಕಥೆ, ಅರ್ಜುನ ಫಕ್ಕೀರಪ್ಪ ಅಂಬಡಗಟ್ಟಿ ರವರಿಂದ ಸುಗಮ ಸಂಗೀತ, ಸಂಗೀತ ಹಾಗೂ ಕಲಾ ತಂಡದಿಂದ ವಚನ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.