Belagavi NewsBelgaum NewsCrimeKannada NewsKarnataka NewsNational

*ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ ಕಿತ್ತೂರು ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಮನೆಗಳ್ಳತನ ಮಾಡಿ ಪರಾರಿಯಾಗುತ್ತಿದ್ದ ಖತರ್ನಾಕ್ ಕಳ್ಳರನ್ನು ಕಿತ್ತೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಸಿದ್ದಾರೆ. 

ಕಿತ್ತೂರು ತಾಲೂಕಿನ ಸುತ್ತಮುತ್ತಲಿನ ಹಲವಾರು ಗ್ರಾಮಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಬಂಧಿಸಲಾಗಿದೆ. 

Home add -Advt

ಹೊಳಿ ನಾಗಲಾಪುರ ಗ್ರಾಮದ ಪತ್ರಯ್ಯ, ನಿಂಗಯ್ಯ ಹಿರೇಮಠ ಹಾಗೂ ಬೈಲಹೊಂಗಲ ಗುಂಡ್ಲೂರ ಚಾಳ್‌ನ ಅನಿಲಕುಮಾರ ಹಿರೇಮಠ ಆರೋಪಿಗಳಾಗಿದ್ದು ಬಂಧಿಸಿ ತನಿಖೆ ನಡೆಸಲಾಗುತ್ತಿದೆ.

ಕಳ್ಳರಿಂದ 60 ಗ್ರಾಂ ಬಂಗಾರ, ಒಂದು ದ್ವಿಚಕ್ರ ವಾಹನ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಡಿವೈಎಸ್‌ಪಿ ವೀರಯ್ಯ ಹಿರೇಮಠ, ಸಿಪಿಐ, ಶಿವಾನಂದ ಗುಡಗನಟ್ಟಿ, ಪಿಎಸ್ಐ ಭರತ್, ಎಸ್,ಗಂಗಾಧರ ಹಂಪಣ್ಣವರ ಹಾಗೂ ಪೊಲೀಸ್ ಸಿಬ್ಬಂದಿಗಳಾದ ಲಿಂಗರಾಜ ಗಳಿಗಿ, ಸುನಿಲ್ ಮುರಗೋಡ, ಅದೃಷ್ ಚಿಕ್ಕೇರಿ, ಶರೀಫ್ ದಪೇದಾರ, ನಾಗರಾಜ್ ಕಡಗನ್ನವರ್, ಮಂಜುನಾಥ್ ಕಂಬಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Related Articles

Back to top button