Belagavi NewsBelgaum NewsKannada NewsKarnataka NewsLatest

ಕಿವಡಸಣ್ಣವರ್ ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಎಸ್.ಎಸ್.ಕಿವಡಸಣ್ಣವರ್ ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಚುನಾವಣೆಯ ಮತಗಳ ಎಣಿಕೆ ನಡೆದು, ಫಲಿತಾಂಶ ಮಧ್ಯರಾತ್ರಿಯ ನಂತರ ಪ್ರಕಟವಾಗಿದೆ. 1632 ಮತಗಳಲ್ಲಿ 914 ಮತಗಳನ್ನು ಪಡೆದು ಕಿವಡಸಣ್ಣವರ್ 6ನೇ ಬಾರಿ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಮುಗಳಿ ಬಸವರಾಜ ಮಲ್ಲಪ್ಪ, ರಾಮಶೆಟ್ಟಿ ಶೀತಲ್ ಎಂ. ಮತ್ತು ವಿ.ವಿ.ಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ವೈ.ಕೆ.ದೀವಟೆ, ಜಂಟಿ ಕಾರ್ಯದರ್ಶಿಯಾಗಿ ವಿಶ್ವನಾಥ ಸುಲ್ತಾನಪುರೆ, ಆಡಳಿತ ಮಂಡಳಿ ಸದಸ್ಯರಾಗಿ ಸುಮಿತ್ ಕುಮಾರ ಅಗಸಗಿ, ಪೂಜೇರ ಈರಪ್ಪ, ಸುರೇಶ ಕಾಡಪ್ಪ ನಿಂಗನೂರೆ ಮತ್ತು ಅನಿಲ ಪಾಟೀಲ, ಮಹಿಳಾ ಪ್ರತಿನಿಧಿಯಾಗಿ ಅಶ್ವಿನಿ ಹವಾಲ್ದಾರ ಆಯ್ಕೆಯಾಗಿದ್ದಾರೆ.



Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button