*ಕೆಎಲ್‍ಇಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಪರೀಕ್ಷೆ ಮೂಲಕ ಶಿಷ್ಯವೇತನ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆ.ಎಲ್.ಇ. ಸಂಸ್ಥೆಯ ವಿವಿಧ ಪಿಯುಸಿ ಕಾಲೇಜುಗಳಲ್ಲಿ 2024-25ನೇ ಸಾಲಿಗೆ ಪ್ರಥಮ ಪಿಯುಸಿ ಪ್ರವೇಶ ಪಡೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಪರೀಕ್ಷೆ ನಡೆಸುವ ಮೂಲಕ ಶಿಷ್ಯವೇತನ ನೀಡಲಾಗುವುದು ಎಂದು ಮಾಜಿ ವಿಧಾನ ಪರಿಷತ್ತ ಮುಖ್ಯ ಸಚೇತಕರು ಹಾಗೂ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ತಿಳಿಸಿದರು.
ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
1916ರಲ್ಲಿ ಸ್ಥಾಪನೆಗೊಂಡ ಕೆಎಲ್‍ಇ ಸಂಸ್ಥೆಯು ಇಂದು 309ರಷ್ಟು ಅಂಗಸಂಸ್ಥೆಗಳೊಂದಿಗೆ ಶಿಕ್ಷಣ-ಆರೋಗ್ಯ-ಸಂಶೋಧನಾ ಕ್ಷೇತ್ರದಲ್ಲಿ ಜಾಗತಿಕವಾದ ಮನ್ನಣೆ ಗಳಿಸಿದೆ. ಅದರಲ್ಲಿಯೂ ಇಂದು ನಮ್ಮ ಕೆಎಲ್‍ಇ ಸಂಸ್ಥೆಯ 30 ಸಾಯನ್ಸ್ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಹಲವಾರು ಕಾಲೇಜುಗಳು ಈ ವರ್ಷ ಫಲಿತಾಂಶದಲ್ಲಿ 90ಕ್ಕೂ ಹೆಚ್ಚು ಪ್ರತಿಶತವನ್ನು ಮಾಡಿವೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಜೆಇಇ ಹಾಗೂ ನೀಟ್ ಪರೀಕ್ಷೆಗಳ ತರಬೇತಿಯನ್ನು ಪಡೆದು ತೇರ್ಗಡೆಯಾಗಿದ್ದಾರೆ.
ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ : ಇಂದು ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಾಂಪ್ರದಾಯಿಕ ಶಿಕ್ಷಣ ದೂರಸರಿಯುತ್ತಿದೆ. ವೃತ್ತಿಪರವಾದ ಶಿಕ್ಷಣದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಕಾಲಮಾನಕ್ಕೆ ತಕ್ಕಂತೆ ನಿತ್ಯ ಹೊಸ ಹೊಸ ಕೋರ್ಸುಗಳು ಹುಟ್ಟಿಕೊಳ್ಳುತ್ತಿವೆ. ಸ್ಪರ್ಧಾತ್ಮಕವಾದ ಶಿಕ್ಷಣವನ್ನು ಪಡೆಯುವುದೇ ವಿದ್ಯಾರ್ಥಿಗಳ ಜೀವನದ ಧ್ಯೇಯವಾಗುತ್ತಿವೆ. ಇಂತಹ ಸನ್ನಿವೇಶದಲ್ಲಿ ನಮ್ಮನ್ನು ನಾವು ರೂಪಿಸಿಕೊಳ್ಳುವುದು ಇಂದಿನ ಅಗತ್ಯ ಎಂದರು.
ನೀಟ್‍ದಲ್ಲಿ ಕೆಎಲ್‍ಇ ವಿದ್ಯಾರ್ಥಿಗಳ ಸಾಧನೆ :
ಬೆಳಗಾವಿ ಕೆಎಲ್‍ಇ ಪಿಯು ಕಾಲೇಜು ಜಕ್ಕೇರಿ ಹೊಂಡದ ವಿದ್ಯಾರ್ಥಿನಿಯಾದ ಕುಮಾರಿ ಸಮೃದ್ಧಿ ದೇಸಾಯಿ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 705 ಅಂಕ ಗಳಿಸುವುದರೊಂದಿಗೆ ರಾಷ್ಟ್ರಮಟ್ಟದ 163ನೇ ರ್ಯಾಂಕ್ ಮತ್ತು ರಾಜ್ಯಕ್ಕೆ ವಿದ್ಯಾರ್ಥಿನಿಯರಲ್ಲಿಯೇ 1ನೇ ರ್ಯಾಂಕ್ ಪಡೆದುಕೊಂಡು ಪಾಂಡಿಚೇರಿಯ ಜಿಫ್ಮರ್ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಸೀಟ್‍ನ್ನು ಪಡೆದುಕೊಂಡಿದ್ದಾಳೆ.
ಈ ವರ್ಷ ನೀಟ್ ಪರೀಕ್ಷೆಯಲ್ಲಿ 600ಕ್ಕಿಂತಲೂ ಹೆಚ್ಚಿಗೆ ಅಂಕಗಳನ್ನು ಪಡೆದ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರೆ, 500ಕ್ಕಿಂತಲೂ ಹೆಚ್ಚಿಗೆ ಅಂಕಗಳನ್ನು ಪಡೆದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಈವರೆಗೆ ಮೆರಿಟ್ ಆಧಾರದ ಮೇಲೆ 71 ವಿದ್ಯಾರ್ಥಿಗಳು ಎಂಬಿಬಿಎಸ್‍ಗೆ ದಾಖಲಾಗಿದ್ದರೆ, 21 ವಿದ್ಯಾರ್ಥಿಗಳು ಬಿಡಿಎಸ್‍ಗೆ (ದಂತ ವೈದ್ಯಕೀಯ) 169 ವಿದ್ಯಾರ್ಥಿಗಳು ನರ್ಸಿಂಗ್, 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿ.ಫಾರ್ಮಗೆ ದಾಖಲಾಗಿದ್ದಾರೆ.
ಸಿಇಟಿಯಲ್ಲಿ ಕೆಎಲ್‍ಇ ವಿದ್ಯಾರ್ಥಿಗಳ ಸಾಧನೆ :
ಇದೇ ರೀತಿ ಸಿಇಟಿಯಲ್ಲಿಯೂ ಕೂಡ ಕೆಎಲ್‍ಇ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆಗೈದಿದ್ದಾರೆ.
ಸಿಇಟಿಯಲ್ಲಿ 5000ಕ್ಕಿಂತಲೂ ಕಡಿಮೆ ರ್ಯಾಂಕ್ ಪಡೆದ 60 ವಿದ್ಯಾರ್ಥಿಗಳಿದ್ದಾರೆ
ಸುಮಾರು 1600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆರಿಟ್ ಆಧಾರದ ಮೇಲೆ ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.
ಇನ್ನು ಜೆಇಇಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರೊಂದಿಗೆ 5 ವಿದ್ಯಾರ್ಥಿಗಳು ಎನ್‍ಐಐಟಿ ಮತ್ತು 3 ವಿದ್ಯಾಥಿಗಳು ಐಐಐಟಿಗೆ ಪ್ರವೇಶ ಪಡೆದಿದ್ದಾರೆ.
ಬಡವಿದ್ಯಾರ್ಥಿಗಳ ಸಾಧನೆ:
ಚಿಕ್ಕೋಡಿ, ನಿಪ್ಪಾಣಿ ಮತ್ತು ಗೋಕಾಕ ಭಾಗದ ಮೆಡಿಕಲ್‍ಗೆ ಆಯ್ಕೆಯಾದಂತಹ ವಿದ್ಯಾರ್ಥಿಗಳ ಪಾಲಕರು –
ರೈತ ವರ್ಗದಿಂದ ಬಂದವರು, ಕಿರುಕುಳ ವ್ಯಾಪಾರಸ್ಥರು, ಸೋಂಡಾ ಅಂಗಡಿ ನಡೆಸುವವರು, ಶಿಕ್ಷಕ ವರ್ಗದವರು, ಸರ್ಕಾರಿ ನೌಕರಿ ಮತ್ತು ಅರೆಸರ್ಕಾರಿ ನೌಕರಿಯನ್ನು ಮಾಡುತ್ತಿರುವವರು
ಇಂತಹ ಬಡವರ್ಗದಿಂದ ಬಂದಂತಹ ಮಕ್ಕಳು ವೈದ್ಯಕೀಯ ಸೀಟನ್ನು ಪಡೆದಿರುವುದು ಸಂಸ್ಥೆಗೆ ಹೆಮ್ಮೆಯ ಸಂಗತಿ ಎನಿಸಿದೆ.
ಇನ್ನೊಂದು ಹೆಮ್ಮೆಯ ಸಂಗತಿ ಬೆಂಗಳೂರಿನ 625ಕ್ಕೆ 610 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.
ಶಿಷ್ಯವೇತನ:
ಪ್ರತಿವರ್ಷದಂತೆ ಮುಂಬರುವ ಶೈಕ್ಷಣಿಕ ವರ್ಷದಲ್ಲಿಯೂ ಕೂಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಮೂಲಕ ಕೆಎಲ್‍ಇ ಸಂಸ್ಥೆಯ – Iಟಿಣegಡಿಚಿಣeಜ ಛಿoಟಟege ಗಳಾದ ಸ್ವತಂತ್ರ ಪದವಿಪೂರ್ವ ಕಾಲೇಜು, ಬೆಳಗಾವಿ, ಚಿಕ್ಕೋಡಿ, ನಿಪ್ಪಾಣಿ, ಸಿಎಸ್ ಅಂಗಡಿ ಪಿಯು ಕಾಲೇಜು ಗೋಕಾಕ, ಪ್ರೇರಣಾ ಪಿಯು ಕಾಲೇಜು ವಿದ್ಯಾನಗರ ಹುಬ್ಬಳ್ಳಿ ಮತ್ತು ಪ್ರೇರಣಾ ವಸತಿ ಪಿಯು ಕಾಲೇಜು ಹುಬ್ಬಳ್ಳಿಗಳಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಒದಗಿಸಲಾಗುವುದು.
ಅರ್ಹತಾ / ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಆ ವಿದ್ಯಾರ್ಥಿಗಳ ದಾಖಲಾತಿ ಶುಲ್ಕದಲ್ಲಿ ಶಿಷ್ಯವೇತನದ ರೂಪದಲ್ಲಿ ರಿಯಾಯತಿ ನೀಡಲಾಗುವುದು.
ಒಟ್ಟು 3 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗುವುದು ಅವುಗಳಲ್ಲಿ 2ನ್ನು 10ನೇ ತರಗತಿಯ ವಾರ್ಷಿಕ ಪರೀಕ್ಷೆಗಳ ಪೂರ್ವದಲ್ಲಿ ಅಂದರೆ ಡಿಸೆಂಬರ್ ಮತ್ತು ಜನೇವರಿ ತಿಂಗಳುಗಳಲ್ಲಿ ನಡೆಸುವದು ಮತ್ತು 3 ನೇಯದನ್ನು 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ನಂತರದಲ್ಲಿ ನಡೆಸಲಾಗುವುದು.
ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಮಾದರಿಯ ಪ್ರಶ್ನೆ ಪತ್ರಿಕೆ ಇರುತ್ತದೆ. ಹಾಗಾಗೀ ಈ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ತಮಗೆ ಹತ್ತಿರವಿರುವ ಕೆಎಲ್‍ಇ ಸಂಸ್ಥೆಯ ನಿಗಧಿತ ಪದವಿಪೂರ್ವ ಕಾಲೇಜುಗಳಲ್ಲಿ ಹಾಜರಾಗಬಹುದು.
ಶಿಷ್ಯವೇತನ ಇಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಇವುಗಳಲ್ಲಿ ಒಂದು ಪರೀಕ್ಷೆಗೆ ಹಾಜರಾಗಬೇಕು.
ಸ್ಪರ್ಧಾತ್ಮಕ / ಅರ್ಹತಾ ಪರೀಕ್ಷೆಯು 9 ಮತ್ತು 10ನೇ ತರಗತಿಗಳ ಗಣಿತ ಮತ್ತು ವಿಜ್ಞಾನ ವಿಷಯಗಳ ಮೇಲೆ ಆಧಾರಿತ ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
10ನೇ ತರಗತಿಯಲ್ಲಿ 97% ಕ್ಕಿಂತ ಹೆಚ್ಚಿಗೆ ಅಂಕಗಳಿಸಿದ ಕನಿಷ್ಠ 25 ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ 50% ವಿನಾಯತಿ ಮತ್ತು 95% ರಿಂದ 96.99% ಗಳಿಸಿದ ಕನಿಷ್ಠ 25 ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ 25% ವಿನಾಯತಿ ನೀಡಲಾಗುವುದು.
ಈ ಅವಕಾಶದ ಜೊತೆಗೆ 10ನೇ ತರಗತಿಯಲ್ಲಿ ಶಾಲೆಗೆ ಮೊದಲು ಮತ್ತು ಎರಡನೇ ಸ್ಥಾನಗಳಿಸಿದ ವಿದ್ಯಾರ್ಥಿಗಳಿಗೆ ದಾಖಲಾತಿ ಶುಲ್ಕದಲ್ಲಿ ವಿಶೇಷ ರಿಯಾಯತಿ ನೀಡಿ ಪ್ರೋತ್ಸಾಹಿಸಲಾಗುವುದು.
ಭವಿಷ್ಯತ್ತಿನ ಯೋಜನೆಗಳು:
ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಛಿoಟಿಛಿeಠಿಣ bಚಿseಜ – Iಟಿಣegಡಿಚಿಣeಜ ಛಿoಟಟege ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷ 2024-25 ರಿಂದ ಅಥಣಿ ಮತ್ತು ಗದಗಗಳಲ್ಲಿ ಕೂಡ Iಟಿಣegಡಿಚಿಣeಜ ಛಿoಟಟege ಗಳನ್ನು ಪ್ರಾರಂಭಿಸುತ್ತಿದ್ದೇವೆ.
ಆರ್.ಎಲ್.ವಿಜ್ಞಾನ ಕಾಲೇಜಿನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ನವ್ಹೆಂಬರ್ 24.11.2023 ರಂದು ಆಯೋಜಿಸಲಾಗಿದೆ. ಚಂದ್ರಯಾನದಂತಹ ಯಶಸ್ವಿ ಯೋಜನೆಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಹಾಗೂ ಅವರಲ್ಲಿ ವಿಜ್ಞಾನದ ಕುರಿತು ಆಸಕ್ತಿಯನ್ನು ಮೂಡಿಸುವ ನಿಟ್ಟಿನಲ್ಲಿ ಈ ವಿಜ್ಞಾನದ ಪ್ರದರ್ಶನವನ್ನು ಆಯೋಜಿಸಲಾಗಿದೆ. ಇದರೊಂದಿಗೆ ಆಕರ್ಷವಾದ ನಗದು ಪುರಸ್ಕಾರವನ್ನು ನೀಡಲಾಗುತ್ತಿದ್ದು ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕೆಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ