Belagavi NewsBelgaum NewsHealthKarnataka News

*ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಗರ್ಭಕಂಠ ಕ್ಯಾನ್ಸರ್ ರೋಗ ನಿರೋಧಕ ಚುಚ್ಚುಮದ್ದಿನ ಉಚಿತ ವಿತರಣೆ*

ಪ್ರಗತಿವಾಹಿನಿ ಸುದ್ದಿ: ರೋಗ ಬರುವದಕ್ಕಿಂತ ಮೊದಲೇ ರೋಗದ ಬಗ್ಗೆ ಮುನ್ನೆಚ್ಚರಿಕೆ ವಹಿಸುವದು ಅತ್ಯಗತ್ಯವಾಗಿದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸಂಜಯ ಕಂಬರ ಅಭಿಪ್ರಾಯಪಟ್ಟಿದ್ದಾರೆ.

ಅವರು ಬೆಳಗಾವಿ ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಇನ್ನವರವ್ಹೀಲ ಕ್ಲಬ್ ಆಪ ಬೆಳಗಾವಿ ಅವರ ಸಂಯುಕ್ತಾಶ್ರಯದಲ್ಲಿ ನಡೆದ ಗರ್ಭಕಂಠ ಕ್ಯಾನ್ಸರರೋಗ ನಿರೋಧಕ ಚುಚ್ಚುಮದ್ದಿನ ಕಾರ್ಯಕ್ರಮದ ಅಂಗವಾಗಿ ಮಾತನಾಡುತ್ತಿದ್ದರು. ವಿಶ್ವದಲ್ಲಿ ಪ್ರತಿ ೮ ನಿಮಿಷಗಳಿಗೆ ಒಬ್ಬ ಮಹಿಳೆ ಈ ಗರ್ಭಕಂಠದ ಕ್ಯಾನ್ಸರ ರೋಗಕ್ಕೆ ತುತ್ತಾಗುತ್ತಿರುವದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಹೆಚ್ಚುತ್ತಿರುವ ಕರಣಗಳ ಅಂಕಿಸಂಖ್ಯೆಗಳನ್ನು ಮನದಲ್ಲಿಟ್ಟುಕೊಂಡು ಕೆ ಎಲ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಇನ್ನರ್‌ವ್ಹೀಲ ಕ್ಲಬ ಆಫ ಬೆಳಗಾವಿಯ ಸಂಯೋಜನೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ರೋಗನೀರೋಧಕ ಚುಚ್ಚುಮದ್ದು ೦೯ ವಯಸ್ಸಿನಿಂದ ೧೪ ವಯಸ್ಸೊಳಗಿನ ಕಿಶೋರಿಯರಿಗೆ ಆರುತಿಂಗಳ ಅಂತರದಲ್ಲಿ ೨ ಚುಚ್ಚುಮದ್ದನ್ನು ನೀಡಲಾಗುತ್ತದೆ ಮತ್ತು ೧೫ ವಯಸ್ಸಿನಿಂದ ೨೬ ವಯಸ್ಸಿನವರಿಗೆ ಆರುತಿಂಗಳ ಅಂತರದಲ್ಲಿ ೩ ಚುಚ್ಚುಮದ್ದುಗಳನ್ನು ನೀಡಲಾಗುವದು. ಇಂದು ನಮ್ಮ ಆಸ್ಪತ್ರೆಯಲ್ಲಿ ೫೫ ಜನ ಮಕ್ಕಳಿಗೆ ಈ ಲಸಿಕೆಯನ್ನು ಉಚಿತವಾಗಿದೆ ನೀಡಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಬದಲ್ಲಿ ಮಾತನಾಡಿದ ಇನ್ನರ್‌ವ್ಹೀಲ ಕ್ಲಭ ಆಫ ಬೆಳಗಾವಿಯ ಅಧ್ಯಕ್ಷೆ ಶ್ರೀಮತಿ ಅಪರ್ಣಾ ಭಟ್ಕಲ ಅವರು ಮಾತನಾಡುತ್ತ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಇನ್ನರ್‌ವ್ಹೀಲ ಕ್ಲಭ ಯಾವತ್ತೂ ಮುಂಚೂಣಿಯಲ್ಲಿರುತ್ತದೆ. ಇನ್ನರ್‌ವ್ಹೀಲ ಕ್ಲಭ ಒಂದು ಮಹಿಳಾ ಸಂಘವಾಗಿದ್ದು ಗರ್ಭಕಂಠ ಕ್ಯಾನ್ಸರರೋಗವಷ್ಟೇ ಅಲ್ಲದೇ ಇನ್ನಿತರೆ ಆರೋಗ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮದಲ್ಲಿ ನಮಗೆ ಸಹಕಾರ ನೀಡುತ್ತಿರುವ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸಮಸ್ಥ ಆಡಳಿತ ಮಂಢಳಿ ಹಾಗೂ ಸಿಬ್ಬಂದಿಗೆ ತುಂಬು ಹೃದಯದ ಧನ್ಯವಾದಗಳು ಎಂದು ಅಭಿನಂದಿಸಿದರು.

Home add -Advt

ಕಾರ್ಯಕ್ರಮದಲ್ಲಿ ಗರ್ಭಕಂಠ ಕ್ಯಾನ್ಸರ ರೋಗನಿರೋಧಕ ಚುಚ್ಚುಮದ್ದು ಕಾರ್ಯಕ್ರಮದ ಸಂಯೋಜನಾಧಿಕಾರಿ ಶ್ರೀಮತಿ ಶಿಲ್ಪಾ ಶಾಹ ಅವರು ಸಾಂದರ್ಭಿಕವಾಗಿ ಮಾತನಾಡಿದರು. ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥರಾದ ಡಾ. ಸತೀಶ ಧಾಮನಕರ ಅವರು ಸ್ವಾಗತಿಸಿದರು. ಇನ್ನರವ್ಹೀಲ ಕ್ಲಬ್ ಆಫ ಬೆಳಗಾವಿಯ ಖಜಾಂಚಿ ಶ್ರೀಮತಿ ಭೇಲಾ ಶಿವಲ್ಕರ ಅವರು ವಂದಿಸಿದರು. ಆಸ್ಪತ್ರೆಯ ಜನಸಂಪರ್ಕಾಧಿಕಾರಿ ಸಂತೋಷ ಇತಾಪೆ ನಿರೂಪಿಸಿದರು.

Related Articles

Back to top button