Belagavi NewsBelgaum NewsKannada NewsKarnataka NewsLatest

*ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಕೆಎಲ್ಇ ಸಂಗೀತ ಶಾಲೆಯ ವಾರ್ಷಿಕೋತ್ಸವ ಹಾಗೂ ದಿ.ಪಂಡಿತ ಹಯವದನ ಜೋಶಿ ಅವರ 14ನೇ ಪುಣ್ಯಸ್ಮರಣೆ ಅಂಗವಾಗಿ ಕೆಎಲ್ಇ ಸಂಸ್ಥೆಯ ಸಂಗೀತ ಶಾಲೆಯು ಸ್ವರ ಶ್ರದ್ದಾಂಜಲಿ ಸಂಗೀತ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಿತ್ತು.

ಕಾರ್ಯಕ್ರಮಕ್ಕೆ ಪುಣೆಯ ಸಂಗೀತ್ ನಾಟ್ಯ ಸೇವಾ ಟ್ರಸ್ಟ್ ನ ಕಲಾವಿದರಾದ ಗಂಧರ್ವ ಭೂಷಣ ಜೈರಾಮ್ ಶಿಲ್ಲೆದಾರ್ ಅವರು ಉಪಸ್ಥಿತರಿದ್ದರು.

ಗಂದರ್ವಭೂಷಣ ಜೈರಾಮ ಅವರು ಎರಡು ಗಂಟೆಗಳ ಕಾಲ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯ ಡಾ. ರಾಜೇಶ್ ಪವಾರ್ ಆಗಮಿಸಿದ್ದರು. ಸಂಗೀತ ಮಹಾವಿದ್ಯಾಲಯದ ಸಂಯೋಜಕರಾದ ಡಾ. ರಾಜೇಂದ್ರ ಭಾಂಡನಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪಂಡಿತ್ ರಾಜಾರಾಮ್ ಅಂಬರಡೆಕರ ಉಪಸ್ಥಿತರಿದ್ದರು.

Home add -Advt

ಸಂಗೀತ ಮಹಾವಿದ್ಯಾಲಯದ ಡಾ. ಸುನಿತಾ ಪಾಟೀಲ ಅತಿಥಿಗಳನ್ನು ಪರಿಚಯಿಸಿದರೆ, ಡಾ. ದುರ್ಗಾ ನಾಡಕರಣಿ ನಿರೂಪಿಸಿದರು. ಸಂಗೀತ ಬಾಂದೆಕರ ವಂದಿಸಿದರು. ಯಾದವೇಂದ್ರ ಪೂಜಾರಿ, ರಾಹುಲ್ ಮಂಡೋಳ್ಕರ್, ಭಕ್ತಿ ಅಂಬರ್ದೇಕರ್ ಅವರು ತಬಲಾ ಹಾಗೂ ಹಾರ್ಮೋನಿಯಂ ಸಾಥ ನೀಡಿದರು.

Related Articles

Back to top button