Cancer Hospital 2
Bottom Add. 3

*ಕೆಎಲ್ಇ: ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಆರಂಭ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆ ಎಲ್ ಇ ವಿಶ್ವವಿದ್ಯಾಲಯದಲ್ಲಿ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಆರಂಭಿಸಲಾಗಿದೆ ಎಂದು ಕೆ ಎಲ್ ಇ ಸಂಸ್ಥೆಯ ಮುಖ್ಯಸ್ಥ ಡಾ.ಪ್ರಭಾಕರ್ ಕೋರೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾರತದಲ್ಲಿ ಆರೋಗ್ಯ ಸೇವೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸುವಲ್ಲಿ ಕೆಎಲ್‌ ಇ ಅಕಾಡೆಮಿ ಆಫ್ ಹೈಯರ್‌ಎಜುಕೇಶನ್‌ ಅಂಡ್‌ ರಿಸರ್ಚ್ (ಕಾಹೆರ) ನ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ ಎಂದು ತಿಳಿಸಿದರು.

ಬೆಳಗಾವಿಯ ಕೆಎಲ್‌ ಇ ಅಕಾಡೆಮಿ ಆಫ್ ಹೈಯರ್‌ಎಜುಕೇಶನ್‌ ಅಂಡ್‌ ರಿಸರ್ಚ್ (ಕಾಹೆರ), ಯುಜಿಸಿ ೧೯೫೬ರ ಕಾಯ್ದೆಯಂತೆಯು/ಎಸ್ ೩ ಪ್ರಕಾರ ೧೩ನೇ ಏಪ್ರಿಲ್ ೨೦೦೬ ರಂದು ಸ್ಥಾಪಿತವಾದ ವಿಶ್ವವಿದ್ಯಾನಿಲಯವು ವೈದ್ಯಕೀಯದಲ್ಲಿ ಪದವಿಪೂರ್ವ, ಸ್ನಾತಕೋತ್ತರ ಮತ್ತು ಸ್ನಾತಕೋತ್ತರ ಕೋರ್ಸಗಳನ್ನು ನೀಡುತ್ತಿದೆ. ದಂತ, ಔಷಧಶಾಸ್ತ್ರ (ಫಾರ್ಮಸಿ), ಆಯುರ್ವೇದ, ಹೋಮಿಯೋಪತಿ, ಫಿಸಿಯೋಥೆರಪಿ, ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕೋರ್ಸಗಳನ್ನು ಒಳಗೊಂಡಿದೆ. ಗುಣಮಟ್ಟದ ಬೋಧನೆ ಮತ್ತು ಸಂಶೋಧನೆಯನ್ನು ನಡೆಸುವಲ್ಲಿ ಅನನ್ಯ ಸಾಧನೆ ಮಾಡಿದೆ.

೩ ನೇ ಮರುಮೌಲ್ಯಮಾಪನದಲ್ಲಿ ಸಿಜಿಪಿಎ ೩.೩೯ ನೊಂದಿಗೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆಕೌನ್ಸಿಲ್ (ನ್ಯಾಕ್)ನಿಂದ ಎ+ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.

. ಭಾರತ ಸರ್ಕಾರದಿಂದ (ಎಂಹೆಚ್‌ಆರ್‌ಡಿ ) ವಿಶ್ವವಿದ್ಯಾನಿಲಯವನ್ನು “ಎ” ಮಾನ್ಯತೆ ಗಳಿಸಿದೆ.

. ಯುಜಿಸಿಯಿಂದ ೧೨-ಬಿ ಸ್ಥಾನಮಾನವನ್ನು ನೀಡಲಾಗಿದ್ದು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕೇಂದ್ರ ಸರ್ಕಾರದಿಂದ ಧನಸಹಾಯ ಪಡೆದ ಸಂಸ್ಥೆಗಳಿಂದ ಆರ್ಥಿಕ ನೆರವು ಪಡೆಯಲು ಅರ್ಹರಾಗಿದ್ದಾರೆ.

  • ವಿಶ್ವ ಆರೋಗ್ಯ ಸಂಸ್ಥೆ, ಎನ್‌ಐಹೆಚ್ (ಅಮೇರಿಕಾ),ಐಸಿಎಂಆರ್ ಗಳಿಂದ ಮಾನ್ಯತೆ ಪಡೆದಿದ್ದು, ಅಮೇರಿಕೆ ಯಥಾಮಸ್‌ ಜೆಫರ್ಸನ್ ವಿಶ್ವವಿದ್ಯಾಲಯ, ಹಾರ್ವರ್ಡ್ ವಿಶ್ವವಿದ್ಯಾಲಯ, ಕಿಂಗ್ಸ್ ಕಾಲೇಜ್, ಲಂಡನ್ ಅವುಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
    ಕೆಎಲ್‌ಇ ಸಂಸ್ಥೆಯಡಾ ಪ್ರಭಾಕರ್‌ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಅಂಗಾAಗ ಕಸಿ ಸೇರಿದಂತೆ ಎಲ್ಲಾ ರೀತಿಯ ಚಿಕಿತ್ಸಾ ವಿಶೇಷತೆಗಳೊಂದಿಗೆ ೨೫೦೦ ಹಾಸಿಗೆಗಳು ಮತ್ತು ಅತ್ಯಾಧುನಿಕ ವೈದ್ಯಕೀಯ ಮೂಲಸೌಕರ್ಯಗಳನ್ನು ಒಳಗೊಂಡಿದೆ.
    •ದೇಶದಲ್ಲಿ ಅತ್ಯಂತ ಸ್ವಚ್ಚ ವಿಶ್ವವಿದ್ಯಾನಿಲಯವು ಪಟ್ಟಿಯಲ್ಲಿ ಭಾರತ ಸರ್ಕಾ ದಿಂದ ಸತತವಾಗಿ ದೇಶದಲ್ಲಿ ೪ ನೇ ಮತ್ತು ೩ ನೇ ಸ್ವಚ್ಛ ವಿಶ್ವವಿದ್ಯಾಲಯವಾಗಿ ಹೊರಹೊಮ್ಮಿದೆ.
  • ವೈದ್ಯಕೀಯ ಬೋಧಕರಿಗೆತರಬೇತಿ ನೀಡಲು ಭಾರತೀಯ ವೈದ್ಯಕೀಯ ಮಂಡಳಿ / ರಾಷ್ಟ್ರೀಯ ವೈದ್ಯಕೀಯ ಆಯೋಗವು ನೋಡಲ್‌ ಕೇಂದ್ರವಾಗಿ ಗುರುತಿಸಿರುವ ೧೦ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಜೆಎನ್ ವೈದ್ಯಕೀಯ ಮಹಾವಿದ್ಯಾಲಯವೂ ಒಂದು.

ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಟಾರ್ಟ್-ಅಪ್ ಗಳಿಗೆ ಬೆಂಬಲ ಮತ್ತು ಪೋಷಣೆಯ ವಾತಾವರಣವನ್ನು ಸೃಷ್ಟಿಸಲು ಕಾಹೆರ ಮುಂದಡಿ ಇಟ್ಟಿದ್ದು, ರೋಗಿಗಳು, ವೈದ್ಯಕೀಯ ಸಿಬ್ಬಂದಿಗಳ ಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ನಾವಿನ್ಯ ಉತ್ಪನ್ನ ಹಾಗೂ ಸೇವೆಗಳನ್ನು ಅಭಿವೃದ್ದಿಪಡಿಸಲು ಮತ್ತು ಪೂರೈಸಲು ಇಚ್ಚಿಸುವವರಿಗೆ ಸಹಾಯ ಹಸ್ತ ಚಾಚಲಿದೆ. ಉತ್ತಮ ವಿದ್ಯಾರ್ಥಿ ಮತ್ತು ಅಧ್ಯಾಪಕರಲ್ಲಿರುವ ಪ್ರತಿಭೆಯನ್ನು ಆಕರ್ಷಿಸಲು ಅದನ್ನು ಬಲಪಡಿಸುವುದು, ಪೇಟೆಂಟ್ಗಳ ವಾಣಿಜ್ಯೀಕರಣ ಮತ್ತು ವಿಶ್ವವಿದ್ಯಾಲಯದಲ್ಲಿ ಅದರ ಸಂಶೋಧನಾ ವಿಭಾಗ, ಆಸ್ಪತ್ರೆಯ ಸೌಲಭ್ಯಗಳ ಅತ್ಯುತ್ತಮ ಬಳಕೆ ಸೇರಿದಂತೆ ಸ್ಟಾರ್ಟಅಪ್ ಗಳಿಗೆ ಬಹು ಉದ್ದೇಶಿತ ಕಾರ್ಯಗಳಿಗೆ ಸಹಕಾರ ನೀಡಲಿದೆ.

ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿರುವ ಕಾರ್ಪೊರೇಟ್ಗಳಿಗೆ ಹೂಡಿಕೆ ಮತ್ತು ಅನುದಾನದ ಅವಕಾಶಗಳನ್ನು ನೀಡುವ ಮೂಲಕ ಅದರ ಸಿಎಸ್‌ಆರ್ ಹೆಜ್ಜೆ ಗುರುತನ್ನು ಸ್ಥಾಪಿಸುವದು. ಸ್ಟಾರ್ಟ್-ಅಪ್ ಗಳನ್ನು ಉತ್ತೇಜಿಸಲು ಇರುವ ಸರ್ಕಾರಿ ಅನುದಾನಗಳ ಅತ್ಯುತ್ತಮ ಬಳಕೆ, ದ್ವಿತೀಯ ಹಂತದ ನಗರಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಬೆಳಗಾವಿ ಕೇಂದ್ರಿತ ಸ್ಟಾರ್ಟ್ಅಪ್ ಗಳಿಗೆ ಆರ್ಥಿಕತೆ ಸಹಾಯವನ್ನುಕಲ್ಪಿಸಲಿದೆ. ವಿಶ್ವವಿದ್ಯಾನಿಲಯವು ವೈದ್ಯಕೀಯ, ದಂತವೈದ್ಯಕೀಯ, ಫಾರ್ಮಸಿ ಮತ್ತು ಆಯುರ್ವೇದದಲ್ಲಿ ಅಧಿಕ ಸಂಖ್ಯೆಯ ಪೇಟೆಂಟ್ ಗಳನ್ನು ಹೊಂದಿದ್ದು ಹೊಸ ಕಂಪನಿಗಳನ್ನು ಪ್ರಾರಂಭಿಸಲು ಉದ್ಯಮಶೀಲತೆಯ ಸಾಮರ್ಥ್ಯವನ್ನು ಹೊಂದಿದೆ.

ಬಾರತದಲ್ಲಿ ಆರೋಗ್ಯ ಸೇವೆ, ವೈದ್ಯಕೀಯ ತಂತ್ರಜ್ಞಾನ ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ದಿಗೊಳಿಸುವಲ್ಲಿ ಕಾಹೆರನಇನ್ಕ್ಯುಬೇಶನ್ ಮತ್ತುಇನ್ನೋವೇಶನ್ ಸೆಂಟರ್ ಪ್ರಮುಖ ಪಾತ್ರ ವಹಿಸಲಿದೆ. ಇಲ್ಲಿ ಪ್ರಾರಂಭಗೊಳ್ಳುವ ಸ್ಟಾರ್ಟ ಅಪಗಳಿಗೆ ಶೈಕ್ಷಣಿಕ ಸಂಪನ್ಮೂಲ, ಅಗತ್ಯ ಮಾಹಿತಿ, ಮಾರ್ಗದರ್ಶನ, ನೆಟ್ವರ್ಕಿಂಗ್, ಪರಿಣತಿ ಮತ್ತು ಅನುಭವಿ ವೃತ್ತಿಪರರಿಂದ ಸಹಕಾರ ಸಿಗಲಿದೆ. ಕೆಐಐಸಿ ನಿಧಿ ಸಂಗ್ರಹ, ಸಾಮಾಜಿಕ ಜವಾದ್ಬಾರಿ, ಸೇರಿದಂತೆ ಅನೇಕ ರೀತಿಯ ಬೆಂಬಲವನ್ನು ಪಡೆದುಕೊಳ್ಳಬಹುದು. ಪ್ರಾರಂಭಿಕ ಹಂತದಲ್ಲಿ ಎಲ್ಲರೀತಿಯ ಸಹಕಾರವನ್ನು ಕಾಹೇರ ನೀಡಲಿದೆ.

ಕಾಹೆರ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್‌ ಕೇಂದ್ರವು ಸ್ಥಳೀಯ ಮತ್ತು ರಾಷ್ಟ್ರೀಯ ಆರ್ಥಿಕತೆಯ ಬದಲಾವಣೆಗೆ ಅನುಗುಣವಾಗಿ ಮೆಡ್-ಟೆಕ್‌ಸ್ಟಾರ್ಟ ಅಪ್‌ಗಳಿಗೆ ಸಂಪನ್ಮೂಲ ಕಲ್ಪಿಸುವದರೊಂದಿಗೆ ಹೊಸ ಮೆಡ್‌ಟೆಕ್‌ ಉತ್ಪನ್ನ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಿ ವಾಣಿಜ್ಯೀಕರಣಗೊಳಿಸಿ, ಉದ್ಯೋಗಗಳನ್ನು ಸೃಷ್ಟಿಸಲು ಮತ್ತುಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ನಾವೀನ್ಯತೆ ಮತ್ತು ಹೂಡಿಕೆ ಆಕರ್ಷಿಸಲು ಸಹಕರಿಸಲಿದೆ. ಕೆಎಲ್‌ಇ ಇನ್ಕ್ಯುಬೇಶನ್ ಮತ್ತು ಇನ್ನೋವೇಶನ್‌ ಕೇಂದ್ರವು ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನ ವಲಯದಲ್ಲಿನ ಸ್ಟಾರ್ಟ್ ಅಪ್ ಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಾತ್ರ ಮೀಸಲಾಗಿದೆ.

ವೈದ್ಯಕೀಯ ಸಲಕರಣೆ ಮತ್ತು ಅವುಗಳ ಉಪುತ್ಪನ್ನಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮೇಕ್‌ಇನ್‌ಇಂಡಿಯಾ ಕಲ್ಪಣೆಯು ಭಾರತೀಯ ಆರೋಗ್ಯ ರಕ್ಷಣೆಯಲ್ಲಿ ವಿಶೇಷವಾಗಿ ವೈದ್ಯಕೀಯ ಸಲಕರಣೆ ಉದ್ಯಮದಲ್ಲಿ ಬದಲಾವಣೆ ತರಲು ಅವಕಾಶವನ್ನು ಒದಗಿಸುತ್ತದೆ. ಕೆಐಐಸಿ ಈ ಭಾಗದಲ್ಲಿ ಪ್ರಥಮವಾಗಿದ್ದು, ದೇಶದ ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ.

ಕಛೇರಿ ಸ್ಥಳ, ಉಪಕರಣಗಳು, ಮಾರ್ಗದರ್ಶನ, ಯೋಜನೆಯ ಪರೀಕ್ಷೆ, ಮೌಲ್ಯಮಾಪನ, ಪ್ರಮಾಣೀಕರಣ, ನಿಧಿಯನ್ನು ಒಳಗೊಂಡಿರುತ್ತದೆ. ರಾಜ್ಯ ಮತ್ತುದೇಶದಲ್ಲಿರುವಇತರಸ್ಟಾರ್ಟ ಅಪ್‌ಗಳಿಗೆ, ಹೂಡಿಕೆದಾರರು ಮತ್ತು ಆರೋಗ್ಯ ಪೂರೈಕೆದಾರರೊಂದಿಗೆ ಸಂಪರ್ಕ ಸಾಧಿಸುವ ಅವಕಾಶಗಳನ್ನು ಕೂಡಒದಗಿಸಲಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸಲಿದ್ದು, ಕಚ್ಚಾ-ವಸ್ತುಗಳು ಮತ್ತು ಸಲಕರಣೆಗಳ ಪೂರೈಕೆದಾರರಂತಹ ಪೂರೈಕೆ ಸರಪಳಿಯೊಂದಿಗೆ ಇತರ ವ್ಯಾಪಾರದ ಬೆಳವಣಿಗೆಗೆ ಬೆಂಬಲ ನೀಡಲಿದೆ. ಹೊಸ ಉತ್ಪನ್ನಗಳು ಮತ್ತು ಸೇವೆಗಳು ಹೊಸ ಮಾರುಕಟ್ಟೆಗಳನ್ನು ಸೃಷ್ಠಿಸಬಹುದು. ಅಸ್ತಿತ್ವದಲ್ಲಿರುವ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸಿ, ದೇಶದರಫ್ತು ಸಾಮರ್ಥ್ಯವನ್ನು ವಿಸ್ತರಿಸಬಹುದು.

ಮೆಡ್ ಟೆಕ್‌ ಕ್ಷೇತ್ರದಲ್ಲಿ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಅಭಿವೃದ್ಧಿ ಪಡಿಸಲು ಅಗತ್ಯವಿರುವ ಸಂಪನ್ಮೂಲಗಳು ಕ್ರೋಡಿಕರಣ ಮತ್ತು ನಾವಿನ್ಯತೆಗಳಿಗೆ ವೇಗ ನೀಡುವದಲ್ಲದೇ ಸುಧಾರಿತ ಆರೋಗ್ಯ ಮತ್ತು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆಯೊಂದಿಗೆ ಜಾಗತಿಕ ಆರ್ಥಿಥಿಕತೆಯನ್ನು ಸ್ಫರ್ಧೆಯನ್ನು ಹೆಚ್ಚಿಸಲಿದೆ.

ಹೂಡಿಕೆದಾರರು ಯಾವಾಗಲೂ ನವೀನ ಕಂಪನಿಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದು, ಅವರನ್ನು ಮೆಡ್ಟೆಕ್ ವಲಯದಲ್ಲಿ ಹೂಡಲು ಆಕರ್ಷಿಸಲು ಸಹಾಯ ಮಾಡುತ್ತದೆ. ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು, ಅಭಿವೃದ್ದಿ ಹೊಂದಲು ಮತ್ತು ಯಶಸ್ವಿಯಾಗಲು ಅಗತ್ಯವಿರುವ ಬಂಡವಾಳವನ್ನು ಸಂಗ್ರಹಿಸಲು ವೇದಿಕೆಯನ್ನು ಕಲ್ಪಿಸುತ್ತದೆ.

ಕೆಐಐಸಿಯು ಐಐಟಿ ಕಾನ್ಪುರ ಮತ್ತು ಇತರರೊಂದಿಗೆ ಪಾಲುದಾರಿಕೆಯನ್ನು ಹೊಂದಲು ಪ್ರಯತ್ನಿಸುತ್ತಿದೆ ಎಂದು ಪ್ರಭಾಕರ ಕೋರೆ ವಿವರಿಸಿದರು.

Bottom Add3
Bottom Ad 2

You cannot copy content of this page