ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯವು, ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಪ್ರಾದೇಶಿಕ ನಿರ್ದೇಶನಾಲಯ, ಭಾರತ ಸರ್ಕಾರದ ಬೆಂಬಲದೊಂದಿಗೆ “ರಾಷ್ಟ್ರೀಯ ಏಕೀಕರಣ ಶಿಬಿರ” ವನ್ನು ಕೆ.ಎಲ್.ಇ, ಜೆ.ಎನ್.ಎಮ್.ಸಿ ಆವರಣದಲ್ಲಿ ಉದ್ಘಾಟಿಸಲಾಯಿತು.
“ಏಕೀಕರಣದ ಮೂಲಕ ಸುಸ್ಥಿರ ಅಭಿವೃದ್ದಿಯ ಕಡೆಗೆ ಸಣ್ಣ ಬದಲಾವಣೆಗಳು” ಎಂಬ ಶೀರ್ಷಿಕೆಯಡಿಯಲ್ಲಿ ಆರಂಭಗೊಂಡಿರುವ ಈ ಶಿಬಿರ ಇಂದಿನಿಂದ ಏಳು ದಿನಗಳ ಕಾಲ ಜರುಗಲಿದೆ. ಈ ಶಿಬಿರದಲ್ಲಿ ಆರು ರಾಜ್ಯಗಳಿಂದ ಒಟ್ಟು 150 ಎನ್.ಎಸ್.ಎಸ್. ಸ್ವಯಂ ಸೇವಕರು ಪಾಲ್ಗೊಂಡಿದ್ದು, ಕಾರ್ಯಕ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾದ ಸಂಸದೆ ಮಂಗಳಾ ಅಂಗಡಿ, ಲೋಕಸಭಾ ಸದಸ್ಯರು, ಬೆಳಗಾವಿ, ಇವರು ಶಿಬಿರವನ್ನು ಉಧ್ಘಾಟಿಸಿ ರಾಷ್ಟ್ರೀಯ ಸೇವಾ ಯೋಜನೆಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಹಳ್ಳಿಗಳ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು.
ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ನಿತಿನ್ ಗಂಗನೆ ಅವರು ಅಧ್ಯಕ್ಷೀಯ ಬಾಷಣದಲ್ಲಿ ವಿದ್ಯಾರ್ಥಿಗಳು ಸುಸ್ಥಿರ ಅಭಿವೃದ್ದಿ ಬಗ್ಗೆ ಕಲಿತು ತಮ್ಮ ಸಂಸ್ಥೆಗಳಲ್ಲಿ ಮತ್ತು ಪ್ರದೇಶಗಲ್ಲಿ ಅಳವಡಿಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲಿ ಡಾ|| ಎನ್. ಎಸ್. ಮಹಾಂತಶೆಟ್ಟಿ, ಪ್ರಾಂಶುಪಾಲರು, ಕೆ.ಎಲ್.ಇ, ಜೆ.ಎನ್.ಎಮ್.ಸಿ ಇವರು ಎನ್.ಎಸ್.ಎಸ್. ಧ್ಯೇಯ ವಾಕ್ಯ ‘ನನಗಲ್ಲ ನಿನಗೆ’ ಅರಿತುಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಡಾ. ವಿ.ಎ.ಕೋಠಿವಾಲೆ ಕುಲಸಚಿವರು ಸರ್ವರನ್ನು ಸ್ವಾಗತಿಸಿದರು. ಡಾ|| ಅಶ್ವಿನಿ ನರಸನ್ನವರ ಅತಿಥಿಗಳನ್ನು ಪರಿಚಯಿಸಿದರು. ಕೆ.ಎಲ್.ಇ. ನರ್ಸಿಂಗ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿಗಳಾದ ನಮ್ರತಾ ದೇವುಲಕರ ವಂದಿಸಿದರು.
*ಬೆಳಗಾವಿ: 12 ವಿಮಾನಗಳ ಸೇವೆ ಸ್ಥಗಿತ; ಉದ್ಯಮಿಗಳ ಆಕ್ರೋಶ*
https://pragati.taskdun.com/belgaum-airport12-flights-suspendedbusinessmenchamber-of-commerce-hall-meeting/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ