ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ದಿನಾಂಕ 8ರಂದು ಡಾಕ್ಟರ್ ಸ್ನೇಹಾ ರಾಜೂರಿಕರ ಸಂಗೀತ ವಿಭಾಗದ ಮುಖ್ಯಸ್ಥೆ ಇವರ ಶಾಸ್ತ್ರೀಯ ಸಂಗೀತದ ಗಾಯನದೊಂದಿಗೆ ಅಂತರ್ಜಾಲದ ಕಾರ್ಯಕ್ರಮವು ಯಶಸ್ವಿಆಗಿ ಮುಕ್ತಾಯಗೊಂಡಿತು.
ಲಾಕ್ಡೌನ್ ಅವಧಿಯಲ್ಲಿ ಮೇ 12 ರಿಂದ ಸುಮಾರು ಎರಡು ತಿಂಗಳುಗಳ ಕಾಲ ವಾರದಲ್ಲಿ ಎರಡು ದಿನ ಸಂಗೀತ ವಿಭಾಗದ ವಿದ್ಯಾರ್ಥಿಗಳು ಮತ್ತು ಅತಿಥಿ ಕಲಾವಿದರು, ಫೇಸ್ಬುಕ್ ಪೇಜ್ ಅಂತರ್ಜಾಲದ ಮುಖಾಂತರ ಸಂಗೀತ ಕಾರ್ಯಕ್ರಮಗಳನ್ನು ನೀಡಿದರು. ಈ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳಾದ ಹರೀಶ್ ಗ್ರಾಮಪುರೋಹಿತ ಇವರ ತಬಲಾ ಸ್ವತಂತ್ರವಾದನ, ಯೋಗೇಶ ರಾಮದಾಸ, ಮೃತ್ಯುಂಜಯ ಮಾಸ್ತಮರಡಿ, ಸುಹಾಸಿನಿ ದೇಶಪಾಂಡೆ, ಕಾಜಲ್ ದಾಮನೇಕರ್, ಕಲ್ಯಾಣಿ ಗಜಗೇಶ್ವರ್, ದರ್ಶನಿ ಶೆಟ್ಟಿ, ಸುಜಾತ ಹುಚ್ಚೆನಟ್ಟಿ ಇವರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟ್ಟರು
ಕಾರವಾರದ ಸತೀಶ್ ಭಟ್ ಹೆಗ್ಗಾರ (ಹಾರ್ಮೋನಿಯಂ ಸ್ವತಂತ್ರವಾದನ ), ಧಾರವಾಡದ ಭೂಷಣ ಕುಮಾರ ಗುಡ್ಡದಮಠ(ತಬಲಾ ಸ್ವತಂತ್ರವಾದನ), ಧಾರವಾಡದ ಉಸ್ತಾದ್ ಶೇಕ್ ಅಬ್ದುಲ್ಲಾ ಖಾಜಿ ಮತ್ತು ಅವರ ಶಿಷ್ಯ ರೀತು ಗುಮಾಸ್ತ(ಕೊಳಲು ವಾದನ), ಕೊಲ್ಲಾಪುರದ ಗೌರಿ ಕುಲಕರ್ಣಿ, ಕೊಲ್ಲಾಪುರದ ಪ್ರಲ್ಹಾದ ಜಾದವ್, ಬೋಪಾಲದ ಜಯಶ್ರೀ ಸಾವಗುಂಜಿ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಕೊನೆಯ ಅವಧಿಯಲ್ಲಿ ಸಂಗೀತ ವಿಭಾಗದ ಎಲ್ಲಾ ಸಿಬ್ಬಂದಿ ವರ್ಗದವರಿಂದ ಯಾದವೇಂದ್ರ ಪೂಜಾರಿ(ಹಾರ್ಮೋನಿಯಂ ಸ್ವತಂತ್ರ ವಾದನ), ಸೀಮಾ ಕುಲಕರ್ಣಿ ಹಿಂದುಸ್ತಾನಿ ಶಾಸ್ತ್ರೀಯ ಗಾಯನ, ಡಾಕ್ಟರ್ ಸುನೀತಾ ಪಾಟೀಲ್ ಮತ್ತು ಡಾಕ್ಟರ್ ದುರ್ಗಾ ನಾಡಕರ್ಣಿ ಇವರಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಜುಗಲ್ಬಂದಿ ಗಾಯನ ಯಶಸ್ವಿಯಾಗಿ ಮುಕ್ತಾಯಗೊಂಡವು, ಈ ಎಲ್ಲ ಕಲಾಕಾರರಿಗೆ ಜೀತೇಂದ್ರ ಸಾಬಣ್ಣವರ್ ಮತ್ತು ರಾಜೇಂದ್ರ ಭಾಗ್ವತ್ ಇವರು ತಬಲಾ ಸಾತ, ಮತ್ತು ಹಾರ್ಮೋನಿಯಂ ನಲ್ಲಿ ಯಾದವೆಂದ್ರ ಪೂಜಾರಿ, ಯೋಗೇಶ ರಾಮದಾಸ್ ಇವರು ಸಾತ್ಸಂಗತ್ ನಿರ್ವಹಿಸಿದರು. ಎರಡು ತಿಂಗಳ ಅವಧಿಯಲ್ಲಿ ಸುಮಾರು 18 ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಈ ಅಂತರ್ಜಾಲ ಕಾರ್ಯಕ್ರಮ ಕ್ಕೆ ಸಂಗೀತಜ್ಞ ರಿಂದ ಮತ್ತು ಕಲಾ ರಸಿಕರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು.
ಬಿಮ್ಸ್ ಅಭಿವೃದ್ಧಿಗಾಗಿ ಉದ್ಯಮಿಗಳಿಂದ 11.46 ಲಕ್ಷ ರೂಪಾಯಿ ಕೊಡುಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ