*KLS GITಯಿಂದ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಆಯೋಜನೆ*

“ಹ್ಯಾಕ್ ಟು ಫ್ಯೂಚರ್ 2.0” – 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಆಯೋಜನೆ – ಟಿ.ಸಿ.ಎಸ್ ನೊಲೆಜ್ ಪಾರ್ಟ್ನರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರ್ನಾಟಕ ಲಾ ಸೊಸೈಟಿಯ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (KLS GIT), ಬೆಳಗಾವಿಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ “ಹ್ಯಾಕ್ ಟು ಫ್ಯೂಚರ್ 2.0” ಎಂಬ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಉದ್ಘಾಟಿಸಲಾಯಿತು.

ದೇಶದಾದ್ಯಂತದ ವಿದ್ಯಾರ್ಥಿಗಳಿಗೆ ನವೀನ ಯುಕ್ತಿಗಳು ಮತ್ತು ನೈಜ ಜಗತ್ತಿನ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ಕಂಡುಹಿಡಿಯುವ ಅವಕಾಶ ನೀಡುವ ಸ್ಪರ್ಧಾತ್ಮಕ ವೇದಿಕೆಯಾಗಿದೆ.
ಈ ಕಾರ್ಯಕ್ರಮದಲ್ಲಿ ರಾಜೇಂದ್ರ ಬೆಳಗಾವ್ಕರ್, ಅಧ್ಯಕ್ಷರು, ಆಡಳಿತ ಮಂಡಳಿ, KLS GIT, ರಂಗನಾಥ ಪ್ರಭು, ಹಿರಿಯ ಪ್ರೋಗ್ರಾಂ ಮ್ಯಾನೇಜರ, ಹ್ಯುಲೆಟ ಪ್ಯಾಕಾರ್ಡ್ ಎಂಟರ್ಪ್ರೈಸ್ಸ್, ಡಾ. ರಾಜನ ಎಂ. ಎ., ಹಿರಿಯ ವಿಜ್ಞಾನಿ, ಟಿಸಿಎಸ ರಿಸರ್ಚ್ ಮತ್ತಿತರರು ಭಾಗವಹಿಸಿದ್ದರು.
ಇದೇ ವೇಳೆ ಡಾ. ಎಮ್. ಎಸ್. ಪಾಟೀಲ, ಪ್ರಾಂಶುಪಾಲರು, KLS GIT, ಡಾ. ಸಂಜೀವ ಸಣ್ಣಕ್ಕಿ, ವಿಭಾಗಾಧ್ಯಕ್ಷರು, ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಡಾ. ಶಾರದ ಎಂ. ಕೊರಿ ಮತ್ತು ಪ್ರೊ. ಸಾಗರ ಪುಜಾರಿ, ಕಾರ್ಯಕ್ರಮ ಸಂಯೋಜಕರು ಸಹ ಇದ್ದರು.
ಈ ಹ್ಯಾಕಥಾನ್ ಪ್ರಮುಖ ಆಕರ್ಷಣೆ ಎಂದರೆ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS) ರಿಸರ್ಚ್, ಬೆಂಗಳೂರು ಇದರ ಜ್ಞಾನ ಸಹಭಾಗಿತ್ವ ಮತ್ತು ತಜ್ಞರು ನ್ಯಾಯಪೀಠದ ಸದಸ್ಯರಾಗಿ ಭಾಗವಹಿಸಿದ್ದಾರೆ. ಜೊತೆಗೆ ಅಂತರರಾಷ್ಟ್ರೀಯ ಮಟ್ಟದ ಅನುಭವವಿರುವ ತಜ್ಞರು ಒಳಗೊಂಡಿದ್ದಾರೆ:
ಮದನ ಪೆರುಮಲ – ಎನ್.ಎ. ಆಟೋಮೊಟಿವ್ OEM ಗಾಗಿ ಆಟೋಮೊಟಿವ್ ಸಾಫ್ಟ್‌ವೇರ್ ವ್ಯಾಲಿಡೇಶನ್ ವಿಭಾಗದ ಎಂಜಿನಿಯರಿಂಗ್ ಮ್ಯಾನೇಜರ್, ಅರುಣಮೋಹನ ಸುಬ್ರಮಣಿಯನ್ – ನಿರಂತರ ಸುಧಾರಣೆ ವಿಭಾಗದ ನಾಯಕ, ಸಂಜಯ ಆನಂದ್‌ಕುಮಾರ – ಸಲ್ಯೂಷನ್ ಆರ್ಕಿಟೆಕ್ಟ್ – ಅಪ್ಲಿಕೇಶನ್ ಮಾರ್ಗದರ್ಶನ ನೀಡಿದರು.
24 ಗಂಟೆಗಳ ಕಾಲ ನಡೆಯುವ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT), ವೆಬ್ ಅಪ್ಲಿಕೇಶನ್ಸ್ ಮತ್ತು ಸೈಬರ್ ಭದ್ರತೆ ಎಂಬ ಕ್ಷೇತ್ರಗಳಲ್ಲಿ ನೈಜ ಸಮಸ್ಯೆಗಳಿಗೆ ನವೀನ ತಾಂತ್ರಿಕ ಪರಿಹಾರಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಟಿ.ಸಿ.ಎಸ್. ನ ಸಹಕಾರದೊಂದಿಗೆ “ಹ್ಯಾಕ್ ಟು ಫ್ಯೂಚರ್ 2.0” ಎಂಬುದು ವಿದ್ಯಾರ್ಥಿಗಳಿಗೆ ಕೇವಲ ಸ್ಪರ್ಧೆಯಷ್ಟೇ ಅಲ್ಲದೆ, ಸೃಜನಶೀಲತೆ, ಸಹಕಾರ ಮತ್ತು ಉದ್ಯೋಗ ಕ್ಷಿತಿಜ ವಿಸ್ತಾರಗೊಳಿಸುವ ಮಹತ್ವದ ಅವಕಾಶವನ್ನು ಒದಗಿಸುವ ಪಠ್ಯೇತರ ಅನುಭವವಾಗಲಿದೆ.