*ಕೆಎಲ್ಎಸ್ ಜಿಐಟಿ ಎಂಬಿಎ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಅಧ್ಯಯನ ಪ್ರವಾಸ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆ ಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 5 ರಿಂದ 10 ರ ವರೆಗೆ ಆರು ದಿನಗಳ ದುಬೈಗೆ ಅಂತರರಾಷ್ಟ್ರೀಯ ಅಧ್ಯಯನ ಪ್ರವಾಸವನ್ನು ಆಯೋಜಿಸಲಾಗಿತ್ತು.
ಅಂತರಾಷ್ಟ್ರೀಯ ಅಧ್ಯಯನ ಪ್ರವಾಸದಲ್ಲಿ, ವಿದ್ಯಾರ್ಥಿಗಳು ದುಬೈ ಸಿಲಿಕಾನ್ ಓಯಸಿಸ್ ಅಥಾರಿಟಿಯ , ಡಿ-ಟೆಕ್ (ದುಬೈ ಟೆಕ್ನಾಲಜಿ ಎಂಟರ್‌ಪ್ರೆನಿಯರ್ ಸೆಂಟರ್) ಇನ್‌ಕ್ಯುಬೇಶನ್ ಸೆಂಟರ್‌ಗೆ ಭೇಟಿ ನೀಡಿದರು ಮತ್ತು ಸ್ಟಾರ್ಟ್ ಅಪ್ ಇಕೋ ಸಿಸ್ಟಮ್ಸ್ ಮತ್ತು ಎಂಟರ್‌ಪ್ರೆನ್ಯೂರ್‌ಶಿಪ್ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದರು.
ಹಾಗೆಯೇ ವಿದ್ಯಾರ್ಥಿಗಳು ಹೆರಿಯಟ್-ವ್ಯಾಟ್ ವಿಶ್ವವಿದ್ಯಾಲಯ, ದುಬೈ ಕ್ಯಾಂಪಸ್, ಪೋಲಾರಿಸ್ ಇಂಟರ್‌ನ್ಯಾಶನಲ್ ಇಂಡಸ್ಟ್ರೀಸ್ (ಎಲ್ಎಲ್ಸಿ) ಪ್ರೀಮಿಯಂ ಪೀಠೋಪಕರಣಗಳು ಕಂಪನಿಯಲ್ಲಿ, ಕಂಪನಿಯು ಕೈಗೊಳ್ಳುವ ಪೂರೈಕೆ ಸರಪಳಿ ನಿರ್ವಹಣೆ, ಸೇವಾ ನಿರ್ವಹಣೆ ಮತ್ತು ಮಾರ್ಕೆಟಿಂಗ್ ಉಪಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.
ಯುಎಇಯಲ್ಲಿ ಪ್ಯಾಕೇಜಿಂಗ್ ಬಾಕ್ಸ್‌ಗಳ ಅತಿದೊಡ್ಡ ಪೂರೈಕೆದಾರರಾಗಿರುವ ಡಿಸೆಂಟ್ ಪ್ರಿಂಟಿಂಗ್ ಪ್ರೆಸ್‌ಗೆ ಭೇಟಿ ನೀಡಿದ, ವಿದ್ಯಾರ್ಥಿಗಳು ಬ್ರ್ಯಾಂಡಿಂಗ್ ಮತ್ತು ಜಾಹೀರಾತಿಗೆ ಸಂಬಂಧಿಸಿದ ಮತ್ತು ಮುದ್ರಿಸುವ ಬಗ್ಗೆ ಮಾಹಿತಿಯನ್ನು ಪಡೆದರು.
ಡಾ.ನೂಪುರ್, ಡಾ.ಸಂಜಯ್, ಡಾ.ಅಮೀತ್ ಮತ್ತು ಪ್ರೊ.ಸಂಜೀವನಿ ಅಂತರಾಷ್ಟ್ರೀಯ ಅಧ್ಯಯನ ಪ್ರವಾಸವನ್ನು ನಿರ್ವಹಿಸಿದರು. ಎಂಬಿಎ ವಿಭಾಗ ವಿದ್ಯಾರ್ಥಿಗಳು, ಪ್ರವಾಸವನ್ನು ನಡೆಸಲು ಅವಕಾಶ ಮತ್ತು ಪ್ರೋತ್ಸಾಹಕ್ಕಾಗಿ ಕೆಎಲ್ಎಸ್ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ