Kannada NewsKarnataka News

ಮೊಣಕಾಲು ನೋವು, ಬೆನ್ನು ನೋವು ಉಳ್ಳವರಿಗೆ ಶುಭ ಸುದ್ದಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರೋಟರಿ ಕ್ಲಬ್ ಬೆಳಗಾವಿ ದಕ್ಷಿಣ, ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂದಿರ ಟ್ರಸ್ಟ್ ಹಾಗೂ ರಾಜಸ್ಥಾನದ ಡಾ. ರಾಮ್ ಮನೋಹರ ಲೊಹಿಯಾ ಆರೋಗ್ಯ ಜೀವನ ಸಂಸ್ಥಾನ ಇವರ ಸಹಯೊಗದಲ್ಲಿ ಮೊಣಕಾಲು ನೋವು ಹಾಗೂ ಬೆನ್ನು ನೋವಿನ ಚಿಕಿತ್ಸಾ ಶಿಬಿರ ನಡೆಯಲಿದೆ.

ಇದೇ ದಿನಾಂಕ ೨೭.೦೧.೨೦೨೦ ರಿಂದ ೦೨.೦೨.೨೦೨೦ ರವರೆಗೆ ಆರು ದಿನಗಳ ಕಾಲ ಮೊಣಕಾಲು ಹಾಗೂ ಬೆನ್ನು ನೋವಿನ ಚಿಕಿತ್ಸೆಯ ಭವ್ಯ ನ್ಯೂರೊಪತಿ ಶಿಬಿರವನ್ನು ಬೆಳಗಾವಿಯ ಶಹಾಪೂರದಲ್ಲಿರುವ ಶ್ರೀ ದಾನಮ್ಮದೇವಿ ಮಂದಿರದಲ್ಲಿ ಆಯೊಜಿಸಲಾಗಿದೆ.

ಆರು ದಿನಗಳ ಶಿಬಿರದಲ್ಲಿ ಮೊಣಕಾಲು ಹಾಗೂ ಬೆನ್ನು ನೋವಿನಿಂದ ಬಳಲುತ್ತಿರುವವರು ಕೇವಲ ೧೦೦ ರೂಪಾಯಿಗಳ ನೋಂದಣ ಶುಲ್ಕವನ್ನು ನೀಡಿ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ರೊ. ಬಿ. ಜಯಸಿಂಹ – ೭೩೫೩೪೯೧೭೭೬, ರೊ. ನಾಗರಾಜ ನಾಶಿ – ೯೪೪೮೧೫೭೫೧೨, ರೊ. ರಮೇಶ – ೯೮೮೬೩೧೦೫೩೩ ಹಾಗೂ ರೊ. ಶರಣ – ೯೮೮೦೩೨೧೦೦೨.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button