ಕಿರುತೆರೆ ನಟ, ನಿರೂಪಕ ಸಂಜೀವ್ ಕುಲಕರ್ಣಿ ವಿಧಿವಶ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಿರುತೆರೆಯ ಖ್ಯಾತ ನಟ, ನಿರೂಪಕ ಸಂಜೀವ್ ಕುಲಕರ್ಣಿ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 49 ವರ್ಷ ವಯಸ್ಸಾಗಿತ್ತು.

ಕಳೆದ ಹಲವು ವರ್ಷಗಳಿಂದ ಸಂಜೀವ್ ಕುಲಕರ್ಣಿ ಕಾರ್ಡಿಯೋಮಯೋಪತಿ ರೋಗದಿಂದ ಬಳಲುತ್ತಿದ್ದರು. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

Home add -Advt

ಹಲವು ವರ್ಷಗಳಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜೀವ್ ಅವರ ಹೃದಯಸಂಬಂಧಿ ಆರೋಗ್ಯ ಇತ್ತೀಚೆಗೆ ತೀರ ಗಂಹದಗೆಟ್ಟಿತ್ತು. ಅವರ ಚಿಕಿತ್ಸೆಗಾಗಿ ಹಣ ಸಹಾಯ ಮಾಡುವಂತೆ ಹಲವು ಕಲಾವಿದರು, ನಟ ಕಿಚ್ಚ ಸುದೀಪ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೀವ್ ಸಾವನ್ನಪ್ಪಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಚಾಮರಾಜಪೇಟೆಯ ಟಿಆರ್‌ಮಿಲ್ ಬಳಿ ನಡೆಯಲಿದೆ.

ಸಂಜೀವ್ ಕುಲಕರ್ಣಿ ನಿಧನಕ್ಕೆ ಅನೇಕ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

Related Articles

Back to top button