Karnataka NewsLatestSports

*ಕೆಒಎ ಕಚೇರಿ, ಕಂಠೀರವ ಸ್ಟೇಡಿಯಂಗೆ ಭೇಟಿಕೊಟ್ಟ ಜಪಾನ್ ಕೌನ್ಸೆಲ್ ಜನರಲ್ ನವಾತ ಹಿರೋಶಿ*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿರುವ ಜಪಾನಿನ ಕೌನ್ಸೆಲ್ ಜನರಲ್ ನವಾತ ಹಿರೋಶಿ ಅವರು ಕರ್ನಾಟಕ ಒಲಿಂಪಿಕ್ ಭವನದಲ್ಲಿ (ಕೆಒಎ) ಶುಕ್ರವಾರ ಕೆಒಎ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ.ಕೆ.ಗೋವಿಂದರಾಜು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕೆಒಎ ಭವನದಲ್ಲಿರುವ ಹಾಲ್‌ ಆಫ್ ಫೇಮ್ ಆವರಣದಲ್ಲಿ ಅಳವಡಿಸಲಾಗಿರುವ ಒಲಿಂಪಿಯನ್ಸ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರ ಫೋಟೋಗಳನ್ನು ವೀಕ್ಷಿಸಿದ ನವಾತ ಹಿರೋಶಿ ಅವರಿಗೆ ಕೆಒಎ ಅಧ್ಯಕ್ಷರಾದ ಡಾ.ಕೆ.ಗೋವಿಂದರಾಜು ಅವರು ಮಾಹಿತಿ ನೀಡಿದರು. ಇದೇ ವೇಳೆ ಕೆಒಎ ಕಾರ್ಯವೈಖರಿ ಬಗ್ಗೆ ನವಾತ ಹಿರೋಶಿ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕದ ಕ್ರೀಡಾ ಅಭಿವೃದ್ಧಿಗೆ ಸದಾ ಕೈಜೋಡಿಸುವುದಾಗಿ ತಿಳಿಸಿದರು.

ಜೊತೆಗೆ ಕಂಠೀರವ ಒಳಾಂಗಣ ಹಾಗೂ ಹೊರಾಂಗಣ ಸ್ಟೇಡಿಯಂಗಳಿಗೆ ನವಾತ ಹಿರೋಶಿ ಭೇಟಿ ನೀಡಿದರು. ಬಳಿಕ ಹಿರೋಶಿ ಅವರಿಗೆ ಮೈಸೂರು ಪೇಟ ಹಾಕಿ ಡಾ.ಕೆ.ಗೋವಿಂದರಾಜು ಅವರು ಸನ್ಮಾನಿಸಿದರು. ಈ ವೇಳೆ ಕೆಒಎ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button