Latest

ಪಾನಮತ್ತನಾಗಿ ಮನೆಗೆ ಬೆಂಕಿಯಿಟ್ಟ ಪಾಪಿ; 6 ಜನ ಸಜೀವದಹನ

ಪ್ರಗತಿವಾಹಿನಿ ಸುದ್ದಿ; ಕೊಡಗು: ಪಾನಮತ್ತ ವ್ಯಕ್ತಿಯೊಬ್ಬ ಮನೆಯ ಹೊರಗೆ ಬಾಗಿಲು ಲಾಕ್ ಮಾಡಿ ಮನೆಗೆ ಬೆಂಕಿ ಹಚ್ಚಿ 6 ಜನರನ್ನು ಕೊಂದ ಹೃದಯವಿದ್ರಾವಕ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ನಡೆದಿದೆ.

ಎರವರ ಭೋಜ ದುಷ್ಕೃತ್ಯವೆಸಗಿದ ವ್ಯಕ್ತಿ. ಎರವರ ಮಂಜು ಎಂಬುವವರ ಮನೆಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾನೆ. ಮನೆಯ ಹೊರಗೆ ಬಾಗಿಲು ಹಾಕಿ ಬೆಂಕಿ ಹಚ್ಚಿದ್ದರಿಂದ ಕುಟುಂಬ ಸದಸ್ಯರು ಹೊರಬರಲಾಗದೇ ಪರದಾಡಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಮೂವರು ಮನೆಯೊಳಗೆ ಸಜೀವದಹನಗೊಂಡಿದ್ದಾನೆ.

ಗಂಭೀರವಾಗಿ ಸುಟ್ಟಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿ ಅವರು ಕೂಡ ಸಾವನ್ನಪ್ಪಿದ್ದಾರೆ. ಮೃತರನ್ನು ಬೇಬಿ (40) ಸೀತೆ, ಪ್ರಾರ್ಥನಾ, ವಿಶ್ವಾಸ್, ಪ್ರಕಾಶ್, ವಿಶ್ವಾಸ್ (3) ಎಂದು ಗುರುತಿಸಲಾಗಿದೆ.

ಮದ್ಯಸೇವಿಸಿ ಬಂದ ವ್ಯಕ್ತಿಯ ಈ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button